Advertisement

ಖ್ಯಾತ ತಮಿಳು ನಟ ವಿಕ್ರಮ್ ಗೆ ಹೃದಯಾಘಾತ, ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

03:14 PM Jul 08, 2022 | Team Udayavani |

ಚೆನ್ನೈ: ಖ್ಯಾತ ತಮಿಳು ನಟ ವಿಕ್ರಮ್ (56ವರ್ಷ) ಶುಕ್ರವಾರ (ಜುಲೈ 08) ಹೃದಯಾಘಾತದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಚಿಯಾನ್ ವಿಕ್ರಮ್ ಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದಾಗಿ ವರದಿ ವಿವರಿಸಿದೆ.

Advertisement

ಇದನ್ನೂ ಓದಿ:ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಕಾಂಗ್ರೆಸ್ ಪಕ್ಷ ಭಿಕ್ಷೆ ಬೇಡುತ್ತದೆ:ಡಿ.ಕೆ.ಶಿವಕುಮಾರ್ ಕಿಡಿ

ವಿಕ್ರಮ್ ಆರೋಗ್ಯದ ಕುರಿತಂತೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಲಾಗಿದೆ. ಮೂಲಗಳ ಪ್ರಕಾರ, ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದೆ.

ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ವಿಕ್ರಮ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮತ್ತೊಂದು ವರದಿ ತಿಳಿಸಿದೆ. ಇಂದು ಸಂಜೆ ಆರು ಗಂಟೆಗೆ ನಟ ವಿಕ್ರಮ್ ಅವರು ತಮ್ಮ ಮುಂಬರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು ಎಂದು ಮೂಲಗಳು ಹೇಳಿವೆ.

ವಿಕ್ರಮ್ ಚಿಯಾನ್ ವಿಕ್ರಮ್ ಎಂದೇ ಜನಪ್ರಿಯರಾಗಿದ್ದರು. ಇವರ ನಿಜವಾದ ಹೆಸರು ಕೆನಡಿ ಜಾನ್ ವಿಕ್ಟರ್ ಎಂಬುದಾಗಿ. ನಟ ವಿಕ್ರಮ್ ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Advertisement

ಅದ್ಭುತ ನಟನೆಗಾಗಿ ನಟ ವಿಕ್ರಮ್ ರಾಷ್ಟ್ರಪ್ರಶಸ್ತಿ, ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ 2004ರಲ್ಲಿ ತಮಿಳುನಾಡು ಸರ್ಕಾರ ಕಲೈಮಣಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1990ರ ದಶಕದಲ್ಲಿ ವಿಕ್ರಮ್ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಆದರೆ 1999ರಲ್ಲಿ ಬಿಡುಗಡೆಯಾದ ಸೇತು ಸಿನಿಮಾದ ನಂತರ ವಿಕ್ರಮ್ ಜನಪ್ರಿಯರಾಗಿದ್ದರು. ಜೆಮಿನಿ, ಸಮುರಾಯ್, ಕಾದಲ್, ಸಾಮಿ, ಪಿತಾಮಗನ್, ಅರುಳ್, ಅನ್ನಿಯನ್, ರಾವಣ, ದೈವ ತಿರುಮಗಳ್, ಇರು ಮಗನ್ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ದಾಖಲೆ ವಿಕ್ರಮ್ ಅವರದ್ದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next