Advertisement

ಆಮದು ಸುಂಕ ವಿನಾಯಿತಿ ವಿಚಾರ : ದಂಡ ಪಾವತಿಸಬೇಕಾಗಿದ್ದ ನಟ ವಿಜಯ್ ಗೆ ರಿಲ್ಯಾಕ್ಸ್

06:55 PM Jul 27, 2021 | Team Udayavani |

ಚೆನ್ನೈ : ತೆರಿಗೆ ವಿಚಾರವಾಗಿ ನ್ಯಾಯಾಲಯದಿಂದ ಬುದ್ಧಿ ಹೇಳಿಸಿಕೊಂಡಿದ್ದ ತಮಿಳು ನಟ ವಿಜಯ್ ದಳಪತಿಗೆ ಕೊಂಚ ರಿಲ್ಯಾಕ್ಸ್ ಆಗಿದೆ. ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಕ್ಕೆ ಇದೀಗ ತಡೆ ಬಿದ್ದಿದೆ.

Advertisement

ವಿದೇಶದಿಂದ ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಆಮದು ಮಾಡಿಕೊಂಡು ತೆರಿಗೆ ಕಟ್ಟುವುದರಲ್ಲಿ ವಿನಾಯಿತಿ ಕೇಳಿದ್ದ ನಟ ವಿಜಯ್​ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ತೆರೆಗೆ ಕಟ್ಟಲು ಹಿಂದೇಟು ಹಾಕಿದ್ದಾರೆ. ತೆರಿಗೆ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ. ಇದು ದೇಶವಿರೋಧಿ ಮನಸ್ಥಿತಿ ಎಂದು ಟೀಕಿಸಿ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಜಯ್ ಅವರು ಮದ್ರಾಸ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಮದ್ರಾಸ್​ ಹೈಕೋರ್ಟ್​  ದ್ವಿ-ಸದಸ್ಯ ಪೀಠವು ವಿಜಯ್​ ಪರವಾಗಿ ತೀರ್ಪು ನೀಡಿದ್ದು, ಒಂದು ಲಕ್ಷ ರೂ. ದಂಡಕ್ಕೆ ತಡೆ ನೀಡಿದೆ.  ತೆರೆಗೆ ಕಟ್ಟುವುದಿಲ್ಲ ಎಂದು ವಿಜಯ್​ ಹೇಳುತ್ತಿಲ್ಲ. ಆದರೆ ನಟರ ಸಮುದಾಯದ ಬಗ್ಗೆ ಕಟು ಟೀಕೆ ಮಾಡಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ ಎಂದು ವಿಜಯ್​ ಪರ ವಕೀಲರು ವಾದ ಮಂಡಿಸಿದ್ದಾರೆ. ಒಂದು ವಾರದೊಳಗೆ ನಟ ವಿಜಯ್​ ಅವರ ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರಿಗೆ ಬಾಕಿ ಉಳಿಸಿಕೊಂಡಿರುವ ಶೇ.80ರಷ್ಟು ಎಂಟ್ರಿ ಟ್ಯಾಕ್ಸ್​ ಕಟ್ಟಬೇಕು ಎಂದು ಈಗ ಮದ್ರಾಸ್​ ಹೈಕೋರ್ಟ್​ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next