Advertisement
ಕೋವಿಡ್ ಎರಡನೆ ಅಲೆಯಿಂದ ತೊಂದರೆ ಎದುರಿಸುತ್ತಿರುವ ಸಿನಿಮಾ ಕಾರ್ಮಿಕರಿಗಾಗಿ ಆಹಾರದ ಕಿಟ್ ಸೇರಿದಂತೆ ಇನ್ನಿತರ ಸಹಾಯ ಮಾಡುವ ಮೂಲಕ ಉಪೇಂದ್ರ ಅವರು ಕೋವಿಡ್ ವಿರುದ್ಧದ ಹೋರಾಟಕ್ಕೆ ಇಳಿದಿದ್ದಾರೆ. ಕೇವಲ ಸಿನಿಮಾ ಕಾರ್ಮಿಕರು ಮಾತ್ರವಲ್ಲದೆ ತಮ್ಮ ಬೆಳೆಯನ್ನು ಮಾರಾಟ ಮಾಡದೆ ಕಣ್ಣೀರು ಸುರಿಸುತ್ತಿರುವ ಅನ್ನದಾತರಿಗೂ ಉಪ್ಪಿ ನೆರವಿನ ಹಸ್ತ ಚಾಚಿದ್ದಾರೆ. ಆದರೆ, ಉಪೇಂದ್ರ ಅವರ ಈ ಕಾರ್ಯಕ್ಕೆ ಕೆಲವು ಕಿಡಿಗೇಡಿಗಳು ರಾಜಕೀಯ ಬಣ್ಣ ಹಚ್ಚಿದ್ದಾರೆ. ರಾಜಕೀಯ ಲಾಭಕ್ಕಾಗಿ ಉಪೇಂದ್ರ ಹೀಗೆ ಸಮಾಜ ಸೇವೆಗಿಳಿದಿದ್ದಾರೆ ಎಂಬ ಕುಹುಕಗಳೂ ವ್ಯಕ್ತವಾಗಿವೆ. ಇದೇ ಕಾರಣಕ್ಕೆ ಉಪೇಂದ್ರ ಅವರು ಎಲ್ಲರಿಗೂ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
- ಆತಂಕ ಪಡಬೇಡಿ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು – ನಾನೆಂದೂ ನಾಯಕನಾಗುವುದಿಲ್ಲ.
- ಭಯ ಪಡಬೇಡಿ ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ ( split ) ಆಗುತ್ತದೆ ಎಂದು – ನಾಯಕನಾಗಬೇಕೆಂದು ಧೃಡ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ !
- ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ ರಾಜಕೀಯ ಭದ್ರತೆ, ಮತ್ತು ಆರ್ಥಿಕ (ಹಣ) ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ, ಅದು ಕಡಿಮೆಯಾಗಬಾರದು ಇಮ್ಮಡಿ ( double) ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.
- 20 % ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಭಲದ ಪ್ರಭಲ ಗುಂಪಿನಲ್ಲಿದ್ದೇನೆಂದು ಹೆಮ್ಮೆ ಪಡಬೇಡಿ, 80 % ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ.
- ನಾನು ಎಲೆಕ್ಷನ್ ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನ ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ ! ಇರಲಿ ಒಂದು ಸತ್ಯ ತಿಳಿಯಿರಿ ….
- 20% ” ನಾನು ” ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ, ನೀನು ಎನ್ನುವ 80% ಜನರ ಜೊತೆ ಅವನೇ (ದೇವರು) ಇರುತ್ತಾನೆ.
Related Articles
Advertisement