Advertisement

ಕೋವಿಡ್ ಸಂಕಷ್ಟ : ಅನ್ನದಾತರ ನೆರವಿಗೆ ಧಾವಿಸಿದ ನಟ ಉಪೇಂದ್ರ

04:00 PM May 15, 2021 | Team Udayavani |

ಚಿತ್ರನಟ ಉಪೇಂದ್ರ ಅವರು ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ.

Advertisement

ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಬೆಳೆದ ಬೆಳೆಯನ್ನು ಸೂಕ್ತ ಸಮಯಕ್ಕೆ ಮಾರಾಟ ಮಾಡಲು ಆಗದೆ ಕಂಗಾಲಾಗಿರುವ ಅನ್ನದಾತರಿಗೆ ಅನುಕೂಲ ಮಾಡಲು ಉಪ್ಪಿ ಮುಂದಾಗಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿರುವ ಉಪೇಂದ್ರ, ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ದಿನಸಿ ಕಟ್ ಅಥವಾ ರೇಷನ್ ಕಿಟ್‌ನಲ್ಲಿ ಕೊಡಲು ನಿರ್ಧರಿಸಿದ್ದಾರೆ.

ಟ್ವಿಟರಿನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ನೀವು ಬೆಳೆದ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿ, ಅದನ್ನು ನಾವು ಖರೀದಿಸುತ್ತೇವೆ ಎಂದು ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ ”ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ…. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ. ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ ) Mbl no 9845763396” ಎಂದು ಕೇಳಿಕೊಂಡಿದ್ದಾರೆ.

ರೈತರು ಹಂಚಿಕೊಳ್ಳಬೇಕಾದ ಮಾಹಿತಿ

  1. ನೀವು ಬೆಳೆದ ಬೆಳೆ ಯಾವುದು ?
  2. ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ ?
  3. ಅದರ ಅಂತಿಮ ಬೆಲೆ ಎಷ್ಟು ?
  4. ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು ?
Advertisement

ಈ ವಿವರಗಳನ್ನು  ವಾಟ್ಸ್ಅಪ್ ನಂಬರ್ +91 98457 63396 ಗೆ ಕಳುಹಿಸಿ ಕೊಡಿ ಎಂದು ಉಪ್ಪಿ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next