Advertisement

ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

08:52 PM Jun 29, 2022 | Team Udayavani |

ಮುಂಬೈ: ಆಸ್ಕರ್‌ ಸಿನಿಮಾ ಸಮಿತಿಗೆ ಬಾಲಿವುಡ್‌ ನಟಿ ಕಾಜೋಲ್‌, ತಮಿಳು ನಟ ಸೂರ್ಯ, ನಿರ್ದೇಶಕಿ ರೀಮಾ ಕಾಗ್ತಿ ಸದಸ್ಯರಾಗಿದ್ದಾರೆ.

Advertisement

ಅವರಲ್ಲದೆ, ನಿರ್ಮಾಪಕರಾಗಿರುವ ಸುಶ್ಮಿತ್‌ ಘೋಷ್‌ ರಿಂಟು ಥಾಮಸ್‌, ಪಾನ್‌ ನಳಿನ್‌ ಕೂಡ ಸೇರಿದ್ದಾರೆ. ಅವರೆಲ್ಲರೂ 397 ಹೊಸ ಸದಸ್ಯರ ಪಟ್ಟಿಯಲ್ಲಿ ಇದ್ದಾರೆ ಎಂದು ಮೋಷನ್‌ ಪಿಕ್ಚರ್‌ ಆರ್ಟ್ಸ್ ಆ್ಯಂಡ್‌ ಸೈನ್ಸಸ್‌ ಅಕಾಡೆಮಿ ಪ್ರಕಟಿಸಿದೆ. ಪ್ರಸಕ್ತ ಸಾಲಿನ ಸದಸ್ಯರ ಪೈಕಿ ಶೇ.44 ಮಹಿಶೆಯರು ಇದ್ದಾರೆ.

ಪತ್ನಿ ಕಾಜೋಲ್‌ಗೆ ಬಂದ ಈ ಆಹ್ವಾನದಿಂದ ಬಾಲಿವುಡ್‌ ನಟ ಅಜಯ್‌ ದೇವಗನ್‌ ಸಂತೋಷಗೊಂಡಿದ್ದಾರೆ. ಈ ಸಮಿತಿಯಲ್ಲಿ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌, ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌, ಎ.ಆರ್‌.ರೆಹ್ಮಾನ್‌, ಮಾಧುರಿ ದೀಕ್ಷಿತ್‌ರಂತಹ ದಿಗ್ಗಜರು ಸ್ಥಾನ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next