Advertisement

ಐಟಿ ವಿಚಾರಣೆಗೆ ನಟ ಸುದೀಪ್‌ ಹಾಜರು

06:28 AM Jan 15, 2019 | Harsha Rao |

ಬೆಂಗಳೂರು: ಐಟಿ ದಾಳಿ ಪ್ರಕರಣ ಸಂಬಂಧ ಸೋಮವಾರ ನಟ ಸುದೀಪ್‌ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಆಗಮಿಸಿದ ಸುದೀಪ್‌ ಅವರನ್ನು ಮಧ್ಯಾಹ್ನ 1 ಗಂಟೆವರೆಗೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. ದಾಳಿ ಸಂದರ್ಭದಲ್ಲಿ ಅವರ ಮನೆಯಲ್ಲಿ ಪತ್ತೆಯಾದ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಕೆಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಎಲ್ಲದಕ್ಕೂ ಸುದೀಪ್‌ ಉತ್ತರ ನೀಡಿದ್ದಾರೆಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದು ಪ್ರತಿಕ್ರಿಯೆ ನೀಡಿದ ಸುದೀಪ್‌, ಕೆಲವೊಂದು ತಪ್ಪುಗಳು ನಡೆದಿರಬಹುದು. ದಾಳಿ ಸಂದರ್ಭದಲ್ಲಿ ಪಡೆದ ಹೇಳಿಕೆಯನ್ನು ಮತ್ತೂಮ್ಮೆ ದೃಢೀಕರಿಸಿಕೊಳ್ಳಲು ಆಹ್ವಾನ ನೀಡಿದ್ದರು. ಎಲ್ಲದಕ್ಕೂ ಉತ್ತರ ನೀಡಿದ್ದೇನೆ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next