Advertisement

ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ :ಗೇಮ್ ಚೇಂಜರ್ ಎಂದ ಸಿಧು

05:43 PM Jan 10, 2022 | Team Udayavani |

ಚಂಡೀಗಢ: ನಟ, ಪರೋಪಕಾರಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸೋಮವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಪಕ್ಷದ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಫೆಬ್ರವರಿ 14 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬೆಳವಣಿಗೆಯನ್ನು “ಗೇಮ್ ಚೇಂಜರ್” ಎಂದು ಬಣ್ಣಿಸಿದ್ದಾರೆ.

Advertisement

ಅವರು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಸಿಧು ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ.

“ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಇಬ್ಬರೂ ಯಾರೊಬ್ಬರ ಮನೆಗೆ ಗೌರವ ನೀಡಲು ಹೋಗಿದ್ದು ಬಹಳ ಅಪರೂಪ, ಮಾಳವಿಕಾ ಸೂದ್ ಅವರು ಅದಕ್ಕೆ ಅರ್ಹರು” ಎಂದು ಸಿಧು ಹೇಳಿದ್ದಾರೆ.

ಪಂಜಾಬ್‌ನ ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಪಕ್ಷ ಸೇರ್ಪಡೆ ನಡೆಯಿತು. ಕಳೆದ ವರ್ಷ ನವೆಂಬರ್‌ನಲ್ಲಿ ನಟ ತನ್ನ ಸಹೋದರಿ ರಾಜಕೀಯಕ್ಕೆ ಸೇರುವುದಾಗಿ ಘೋಷಿಸಿದ್ದರು.

ಮಾಳವಿಕಾ ಸೂದ್ಅವರು ಮೋಗಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ, ಚನ್ನಿ ಅವರು ಪಕ್ಷದ ಆಯ್ಕೆಯಾಗಲಿದ್ದಾರೆ ಎಂದು ಸೂಚಿಸಿದರು.

Advertisement

“ಎನ್‌ಜಿಒ ನಡೆಸುವ ಮೂಲಕ ಹೆಸರು ಗಳಿಸಿ ಜನಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಯುವತಿಯೊಬ್ಬರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನಮಗೆ ತುಂಬಾ ಸಂತೋಷದ ವಿಷಯ” ಎಂದು ಸಿಧು ಕಾಂಗ್ರೆಸ್‌ಗೆ ಸ್ವಾಗತಿಸಿದರು.

ಮೊಗಾದಿಂದ ಬಂದಿರುವ ಸೋನು ಸೂದ್, ಈ ಹಿಂದೆ ತನ್ನ ಸಹೋದರಿ ಸಾಕಷ್ಟು “ಅದ್ಭುತ” ಕೆಲಸ ಮಾಡಿದ್ದಾಳೆ ಎಂದು ಹೇಳಿದ್ದರು.

ನಟ ಮಾನವೀಯ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ಸಿದ್ದು ಮತ್ತು ಚನ್ನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಮಾಳವಿಕಾ ಸೂದ್ ಕಾಂಗ್ರೆಸ್ ಸೇರುತ್ತಿರುವುದನ್ನು ಉಲ್ಲೇಖಿಸಿದ ಸಿಧು, “ಕ್ರಿಕೆಟ್ ಜಗತ್ತಿನಲ್ಲಿ ಇದನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತದೆ” ಎಂದು ಹೇಳಿದರು. “ಅವರು ಯುವ ಮತ್ತು ವಿದ್ಯಾವಂತ ಮಹಿಳೆ, ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅವರ ಶಿಕ್ಷಣವು ಅವರ ಮುಂದಿನ ಜೀವನದಲ್ಲಿ ಸಹಾಯ ಮಾಡುತ್ತದೆ” ಎಂದು ಸಿಧು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಳವಿಕಾ ಸೂದ್, ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next