Advertisement

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್‌

06:53 PM Sep 20, 2021 | Team Udayavani |

ಮುಂಬೈ : ತಮ್ಮ ಕಚೇರಿ, ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಬಾಲಿವುಡ್‌ ನಟ ಸೋನು ಸೂದ್‌, “ನನ್ನ ಪ್ರತಿಷ್ಠಾನದಲ್ಲಿರುವ ಪ್ರತಿಯೊಂದು ರೂಪಾಯಿ ಕೂಡ ಒಂದು ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ’ ಎಂದು ಹೇಳಿದ್ದಾರೆ.

Advertisement

ತಾವು ಮತ್ತು ತಮ್ಮ ಸಹಚರರು 20 ಕೋಟಿ ರೂ. ತೆರಿಗೆ ವಂಚಿಸಿದ್ದೇವೆ ಎಂಬ ಆರೋಪಗಳಿಗೆ ಸಂಬಂಧಿಸಿ ಸೋಮವಾರ ಪ್ರತಿಕ್ರಿಯಿಸಿದ ಸೂದ್‌, “ನೀವು ಪ್ರತಿಬಾರಿಯೂ ಯಾವುದೇ ವಿಚಾರದ ಬಗ್ಗೆ ನಿಮ್ಮ ವಾದವನ್ನು ಮುಂದಿಡಲೇಬೇಕೆಂದಿಲ್ಲ. ಏಕೆಂದರೆ, ಎಲ್ಲವನ್ನೂ ಕಾಲವೇ ಹೇಳುತ್ತದೆ. ಒಳ್ಳೆಯದನ್ನು ಮಾಡಿದವರಿಗೆ ಕೊನೆಗೆ ಒಳ್ಳೆಯದೇ ಆಗುತ್ತದೆ’ ಎಂದಿದ್ದಾರೆ.

ಐಟಿ ಇಲಾಖೆಯವರು ಕೇಳಿದ ಎಲ್ಲ ದಾಖಲೆಗಳನ್ನೂ ಕೊಟ್ಟಿದ್ದೇನೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನನ್ನ ಕೆಲಸ ನಾನು ಮಾಡಿದ್ದೇನೆ. ಅವರ ಕೆಲಸ ಅವರು ಮಾಡಿದ್ದಾರೆ ಎಂದೂ ಸೂದ್‌ ಹೇಳಿದ್ದಾರೆ. ಇದೇ ವೇಳೆ, ನನ್ನನ್ನು ಎರಡು ಪಕ್ಷಗಳು ಸಂಪರ್ಕಿಸಿ ರಾಜ್ಯಸಭಾ ಸೀಟು ನೀಡುವುದಾಗಿ ಆಫ‌ರ್‌ ನೀಡಿದವು. ಆದರೆ, ನಾನೀಗ ರಾಜಕೀಯ ಸೇರಲು ಮಾನಸಿಕವಾಗಿ ಸಿದ್ಧನಿಲ್ಲ ಎಂದು ಹೇಳಿ ನಯವಾಗಿ ಆಫ‌ರ್‌ ತಿರಸ್ಕರಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ :ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next