Advertisement

“ಮೋಸ ಮಾಡುವವರು ಎಂದೂ ಏಳಿಗೆಯಾಗುವುದಿಲ್ಲ” ಮಾಜಿ ಪ್ರೇಯಸಿ ಸಮಂತಾಗೆ ಕುಟುಕಿದ ಸಿದ್ದಾರ್ಥ್

01:57 PM Oct 04, 2021 | Team Udayavani |

ಹೈದರಾಬಾದ್: ಪತಿ ನಾಗಚೈತನ್ಯ ಅವರಿಗೆ ಡಿವೋರ್ಸ್ ನೀಡಿದ ನಟಿ ಸಮಂತಾ ಅವರನ್ನು ನಟ ಸಿದ್ದಾರ್ಥ್ ಕುಟುಕಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಸುದ್ದಿ ಹೊರ ಬರುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದಾರ್ಥ್ “ ಮೋಸ ಮಾಡುವವರು ಎಂದಿಗೂ ಏಳೆಗೆಯಾಗುವುದಿಲ್ಲ ಎಂದು ಮಾಜಿ ಪ್ರೇಯಸಿಗೆ ಟಾಂಗ್ ಕೊಟ್ಟಿದ್ದಾರೆ.

Advertisement

ಸಮಂತಾ ಮತ್ತು ಸಿದ್ದಾರ್ಥ್ ಮಾಜಿ ಪ್ರೇಮಿಗಳು ಎನ್ನುವುದು ಬಹುತೇಕ ಜನರಿಗೆ ಗೊತ್ತಿರದ ವಿಚಾರ. 2003 ರಲ್ಲಿ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟ, 2007 ರಲ್ಲಿ ಆಕೆಯಿಂದ ವಿಚ್ಛೇದನ ಪಡೆದರು. ನಂತರ ಸೋಹಾ ಅಲಿಖಾನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಈಕೆಯೊಂದಿಗೆ ಬ್ರೇಕಪ್ ಮಾಡಿಕೊಂಡ ಬಳಿಕ ಶೃತಿ ಹಾಸನ್ ಅವರೊಂದಿಗೆ ಮೂರುವರೆ ವರ್ಷ ರಿಲೇಷನ್‍ಶಿಪ್‍ನಲ್ಲಿದ್ದರು ಸಿದ್ದಾರ್ಥ್. ಶೃತಿ ಹಾಸನ್ ಜೊತೆಗಿನ ಪ್ರೀತಿ ಮುರಿದು ಬಿದ್ದ ನಂತರ ಈ ನಟನಿಗೆ ಸಿಕ್ಕದ್ದೆ ಸಮಂತಾ.

ತೆಲುಗಿನ “ಜಬರ್ದಸ್ತ್” ಸಿನಿಮಾ ಸೆಟ್ಟಿನಲ್ಲಿ ಸಮಂತಾ ಹಾಗೂ ಸಿದ್ದಾರ್ಥ್ ಪರಿಚಯವಾಗುತ್ತದೆ. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗುತ್ತದೆ. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ, ಅಷ್ಟರಲ್ಲಾಗಲೇ ಈ ಜೋಡಿ ಬೇರೆ ಬೇರೆಯಾಗುತ್ತದೆ. ಸಿದ್ದಾರ್ಥ್ ಅವರಿಂದ ದೂರವಾದ ಸಮಂತಾ ಅವರು ನಾಗಚೈತನ್ಯ ಅವರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. 2017 ರಲ್ಲಿ ಮದುವೆಯಾಗುತ್ತಾರೆ. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ 4 ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ.

ಸಮಂತಾ ಅವರು ತಮ್ಮ ವಿಚ್ಛೇದನ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೆ ಟ್ವೀಟ್ ಮಾಡಿರುವ ಸಿದ್ದಾರ್ಥ್, ಮೋಸು ಮಾಡುವವರು ಎಂದಿಗೂ ಏಳಿಗೆಯಾಗುವುದಿಲ್ಲ ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next