Advertisement

Actor Shreyas: ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಸಾವಿನ ಸುದ್ದಿ ವೈರಲ್;‌ ಮೌನ ಮುರಿದ ನಟ

11:01 AM Aug 20, 2024 | Team Udayavani |

ಮುಂಬಯಿ: ಬಾಲಿವುಡ್(‌Bollywood) ನಟ ಶ್ರೇಯಸ್ ತಲ್ಪಾಡೆ (Shreyas Talpade) ಅವರ ಸಾವಿನ ಕುರಿತ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ʼಓಂ ಶಾಂತಿʼ ಎಂದು ಬರೆದು ನಟ ಶ್ರೇಯಸ್‌ ತಲ್ಪಾಡೆ ಅವರ ಫೋಟೋವನ್ನು ಹಂಚಿಕೊಂಡಿದ್ದು, ಬಾಲಿವುಡ್‌ ನಟ ಸಾವನ್ನಪ್ಪಿದ್ದಾರೆ ಎಂದು ಅನೇಕ ಟ್ರೋಲ್‌ ಪೇಜ್‌ಗಳು ಸುದ್ದಿಯನ್ನು ಬಿತ್ತರಿಸಿದ್ದವು.

ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಸ್ವತಃ ನಟ ಶ್ರೇಯಸ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಅಭಿಮಾನಿಗಳಲಿದ್ದ ಗೊಂದಲವನ್ನು ದೂರ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?: “ಆತ್ಮೀಯರೇ, ನಾನು ಜೀವಂತವಾಗಿದ್ದೇನೆ. ಸಂತೋಷವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ಸಾವಿನ ಕುರಿತು ಕೆಲ ಪೋಸ್ಟ್‌ ಗಳು ಹರಿದಾಡುತ್ತಿರುವುದು ನನ್ನ ಅರಿವಿಗೆ ಬಂದಿದೆ. ಹಾಸ್ಯಕ್ಕೆ ಅದರದೇ ಆದ ಜಾಗವಿರುತ್ತದೆ. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದು ಹಾನಿಯನ್ನುಂಟುಮಾಡುತ್ತದೆ. ಯಾರೋ ತಮಾಷೆಯಾಗಿ ಶುರುಮಾಡಿರುವ ಈ ವಿಚಾರ ಈಗ  ಅನಾವಶ್ಯಕ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ನನ್ನ ಕುಟುಂಬದವರ ಭಾವನೆಗಳ ಜೊತೆ ಆಟವಾಡುತ್ತಿದೆ” ಎಂದು ಶ್ರೇಯಸ್‌ ಹೇಳಿದ್ದಾರೆ.

Advertisement

ಪ್ರತಿದಿನ ಶಾಲೆಗೆ ಹೋಗುವ ನನ್ನ ಪುಟ್ಟ ಮಗಳು ನನ್ನ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಾಳೆ. ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಸುಳ್ಳು ಸುದ್ದಿಯು ಅವಳ ಭಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅವಳ ಗೆಳೆಯರು ಮತ್ತು ಶಿಕ್ಷಕರಿಂದ ಹೆಚ್ಚಿನ ಪ್ರಶ್ನೆಗಳನ್ನು ಎದುರಿಸುವಂತೆ ಒತ್ತಾಯಿಸುತ್ತದೆ ಎಂದಿದ್ದಾರೆ.

“ಈ ವಿಷಯವನ್ನು ಹಂಚಿಕೊಳ್ಳುತ್ತಿರುವವರಿಗೆ ನಾನು ಇದರ ಪರಿಣಾಮದ ಬಗ್ಗೆ ಯೋಚಿಸಲು ಹೇಳುತ್ತೇನೆ. ಅನೇಕ ಜನರು ನನ್ನ ಯೋಗಕ್ಷೇಮಕ್ಕಾಗಿ ಪ್ರಾಮಾಣಿಕವಾಗಿ ಪ್ರಾರ್ಥಿಸಿದ್ದಾರೆ. ಭಾವನೆಗಳಿಗೆ ನೋವುಂಟುಮಾಡುವ ರೀತಿಯಲ್ಲಿ ಹಾಸ್ಯವನ್ನು ಬಳಸುವುದನ್ನು ನೋಡಲು ಬೇಸರವಾಗುತ್ತದೆ. ಇದು ನನ್ನ ಪ್ರೀತಿಪಾತ್ರರಿಗೆ ದುಃಖವನ್ನು ಉಂಟುಮಾಡುತ್ತದೆ. ನೀವು ಇಂತಹ ವದಂತಿಗಳನ್ನು ಹರಡಿದಾಗ ಅದು ಗುರಿಪಡಿಸಿದ ವ್ಯಕ್ತಿಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು ಅವರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ” ಎಂದಿದ್ದಾರೆ.

ನಿಮ್ಮ ಕಾಳಜಿ ಮತ್ತು ಪ್ರೀತಿ ನನಗೆ ಪ್ರಪಂಚವಾಗಿದೆ. ಟ್ರೋಲ್‌ ಮಾಡುವವರಿಗೆ ನನ್ನದೊಂದು ಸರಳ ವಿನಂತಿ: ದಯವಿಟ್ಟು ನಿಲ್ಲಿಸಿ. ಇತರರ ಜೀವಕ್ಕೆ ಹಾನಿಯಾಗುವ ಹಾಗೆ ಜೋಕ್ ಮಾಡಬೇಡಿ ಮತ್ತು ಬೇರೆ ಯಾರಿಗೂ ಇದನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಡಿಸೆಂಬರ್ 2023ರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಹೃದಯಘಾತವಾಗಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಿ ಅವರು ಪ್ರಾಣಪಾಯದಿಂದ ಪಾರಾಗಿ ಬಂದಿದ್ದರು. ಸದ್ಯ ನಟ ʼವೆಲ್‌ ಕಂ ಟು ದಿ ಜಂಗಲ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.