Advertisement

Actor Rituraj Singh: ಹೃದಯ ಸ್ತಂಭನದಿಂದ ಜನಪ್ರಿಯ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

12:15 PM Feb 20, 2024 | Team Udayavani |

ಮುಂಬಯಿ: ಹೃದಯಸ್ತಂಭನದಿಂದ ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್(59) ನಿಧನರಾಗಿದ್ದಾರೆ.

Advertisement

ಮಂಗಳವಾರ(ಫೆ.20 ರಂದು) ತಡರಾತ್ರಿ ಅವರು ನಿಧನರಾಗಿದ್ದಾರೆ ಎಂದು ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ತಿಳಿಸಿದ್ದಾರೆ.

ಅವರಿಗೆ ತಡರಾತ್ರಿ 12:30ರ ವೇಳೆಗೆ ಹೃದಯಸ್ತಂಭನವಾಗಿದೆ. ಅವರು ಕಳೆದ ಕೆಲ ಸಮಯದಿಂದ ಪ್ಯಾಂಕಿಯಾಟಿಕ್‌ ಕಾಯಿಲೆಯಿಂದ (ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆ) ಬಳಲುತ್ತಿದ್ದರು. ಇದಕ್ಕೆ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎಂದು ವರದಿಯಾಗಿದೆ.

ಕಿರುತೆರೆಯಲ್ಲಿ ಬಹಳ ವರ್ಷದಿಂದ ಬಣ್ಣ ಹಚ್ಚಿರುವ ಅವರು, ಇತ್ತೀಚೆಗೆ ಹಿಂದಿಯ ಜನಪ್ರಿಯ ಧಾರಾವಾಹಿ ʼಅನುಪಮಾʼದಲ್ಲಿ ಕಾಣಿಸಿಕೊಂಡಿದ್ದರು. ಟಿವಿ ಹಾಗೂ ಸಿನಿಮಾರಂಗ ಎರಡರಲ್ಲೂ ಗುರುತಿಸಿಕೊಂಡಿದ್ದ ಅವರು,’ಬನೇಗಿ ಅಪ್ನಿ ಬಾತ್’ , ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ‘ತ್ರಿದೇವಿಯಾನ್’, ‘ದಿಯಾ ಔರ್ ಬಾತಿ ಹಮ್’ ಮುಂತಾದ ಧಾರಾವಾಹಿ ಸೇರಿದಂತೆ ವರುಣ್ ಧವನ್ ಮತ್ತು ಆಲಿಯಾ ಭಟ್ ಜೊತೆಗೆ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಸಿನಿಮಾದಲ್ಲಿ ನಟಿಸಿದ್ದರು. ಆರ್ ಮಾಧವನ್, ದಿವಂಗತ ನಟ ಇರ್ಫಾನ್ ಮತ್ತು ಸುರೇಖಾ ಸಿಕ್ರಿ, ಇತರರೊಂದಿಗೆ ನಟಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next