Advertisement

ಚರ್ಚೆ ಹುಟ್ಟು ಹಾಕಿದ ರೈ ಟ್ವೀಟ್! ಕಾವೇರಿ v/s ರಜನಿಯ “ಕಾಲ”

12:44 PM Jun 04, 2018 | Sharanya Alva |

ಬೆಂಗಳೂರು:ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ತಮಿಳು ಸಿನಿಮಾ “ಕಾಲ” ಕರ್ನಾಟಕದಲ್ಲಿ ಬಿಡುಗಡೆಯಾಗಬಾರದೆಂದು ಕನ್ನಡಪರ ಸಂಘಟನೆಗಳು ಹೇಳಿದ ಬೆನ್ನಲ್ಲೇ ಕಾವೇರಿಗೂ ಕಾಲನಿಗೂ ಎತ್ತಣಿಂದೆತ್ತಣ ಸಂಬಂಧ ಎಂದು ನಟ ಪ್ರಕಾಶ್ ರೈ ಅವರು ಟ್ವೀಟ್ ಮಾಡಿರುವುದು ಇದೀಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

Advertisement

ರೈ ಅವರ ಟ್ವೀಟ್ ಗೆ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಕರವೇಯ ನಾರಾಯಣಗೌಡ, ಸಾರಾ ಗೋವಿಂದು ವಿರೋಧ ವ್ಯಕ್ತಪಡಿಸಿದ್ದಾರೆ. ನಟ ರಜನಿಕಾಂತ್ ಅವರು ಕನ್ನಡದ್ರೋಹಿ, ಅವರು ಕಾವೇರಿ ನದಿ ನೀರಿನ ವಿವಾದ ತಲೆದೋರಿದಾಗ ಸದಾ ತಮಿಳುನಾಡಿನವರ ಪರ ನಿಲ್ಲುತ್ತಾರೆ. ಹೀಗಾಗಿ ರಜನಿಕಾಂತ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡಲ್ಲ. ಯಾರು ಏನ್ ಬೇಕಾದ್ರೂ ಹೇಳ್ಲಿ, ನಾನು ರೈ ಹೇಳಿಕೆಗೆಲ್ಲಾ ಪ್ರತಿಕ್ರಿಯೆ ಕೊಡೋಲ್ಲ ಎಂದು ವಾಟಾಳ್ ಹೇಳಿದ್ದಾರೆ.

ಜಸ್ಟ್ ಆಸ್ಕಿಂಗ್ …ಪ್ರಕಾಶ್ ವಾದವೇನು?

ಕಾವೇರಿಗೂ ಕಾಲ ಸಿನಿಮಾಕ್ಕೂ ಏನು ಸಂಬಂಧ. ಈಗ ಕಾಲ ಸಿನಿಮಾ ಚಿತ್ರದ ಪ್ರದರ್ಶನವನ್ನು ತಡೆಯುವುದರಿಂದ ನಾವು ಸಾಧಿಸುವುದು ಏನನ್ನು ಎಂದು ಒಮ್ಮೆ ಯೋಚಿಸೋಣ. ರಜನಿಕಾಂತ್ ಎನ್ನುವ ನಟರ ಹೇಳಿಕೆಯಿಂದಾಗಿ ನಮಗೆ ಬೇಸರ ಆಗಿರುವುದು ನಿಜ. ತಮ್ಮ ಬೇಸರವನ್ನೂ ವಿರೋಧವನ್ನೂ ವ್ಯಕ್ತಪಡಿಸಲು ಕರ್ನಾಟಕದಲ್ಲಿ ಅವರ ಚಿತ್ರವನ್ನು ಬಹಿಷ್ಕರಿಸಬೇಕೆಂದು ಕೆಲವರು ನಿರ್ಧರಿಸಿದ್ದಾರೆ. ಇದು ಸಮಸ್ತ ಕನ್ನಡಿಗರ ಆಶಯವೇ? ಗೊತ್ತಿಲ್ಲ. ಚಿತ್ರ ಪ್ರದರ್ಶಿಸಲು ಅವಕಾಶ ಕೊಟ್ಟು ಜನರೇ ಚಿತ್ರ ನೋಡದೆ ಇದ್ದಾಗ ಅವರ ವಿರೋಧ ಸ್ಪಷ್ಟವಾಗುತ್ತದೆ. ಇಂಥ ಹೋರಾಟಗಳು ಇದಕ್ಕೆ ಅವಕಾಶ ಕೊಡದೆ ಕೆಲವರು ಮಾತ್ರ ಕನ್ನಡಿಗರಿಗೆ ಏನು ಬೇಕು, ಏನು ಬೇಡ ಎಂದು ನಿರ್ಧರಿಸುವುದು ಯಾವ ನ್ಯಾಯ? ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳದ ಗತಿ ಏನಾಗಬೇಕು? ನೂರಾರು ತಂತ್ರಜ್ಞರ, ಕಲಾವಿದರ, ಸಾವಿರಾರು ಕಾರ್ಮಿಕರ, ದುಡಿಮೆಯ, ಪ್ರತಿಭೆಯ ಪ್ರತಿಫಲವೇನು? ಕೊನೆಯಲ್ಲಿ ಚಾಚಣಿಕೆ ಬಚ್ಚಿಟ್ಟರೆ ಮದುವೆ ನಿಲ್ಲುತ್ತ್ಯೆ ಎಂದು ಪ್ರಶ್ನಿಸಿ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ..

Advertisement
Advertisement

Udayavani is now on Telegram. Click here to join our channel and stay updated with the latest news.

Next