Advertisement
ರಾಜಕೀಯವಾಗಿ ಅವರ ಅಭಿಪ್ರಾಯಗಳನ್ನು ಟೀಕೆ ಮಾಡುವವರು ಅನೇಕರಿದ್ದಾರೆ. ಯಾವ ವಿವಾದ ಬಂದರೂ ನಟ ಪ್ರಕಾಶ್ ರಾಜ್ ಎಲ್ಲದಕ್ಕೂ ಉತ್ತರವನ್ನು ತನ್ನ ಖಾರವಾದ ಟ್ವೀಟ್ ಗಳಿಂದಲೇ ಪ್ರತಿಕ್ರಿಯೆ ನೀಡುತ್ತಾರೆ.
Related Articles
Advertisement
ಕಾರ್ಟೂನ್ ರಚಿತ ಒಬ್ಬ ವ್ಯಕ್ತಿ ಚಹಾವನ್ನು ಮಗಚುವ ಫೋಟೋವೊಂದನ್ನು ಹಾಕಿ “ತಾಜಾ ಸುದ್ದಿ ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ”ವೆಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ನ್ನು ಅನೇಕರು ಟೀಕಿಸಿದ್ದಾರೆ. ಭಾರತದ ಹೆಮ್ಮೆಯಾಗಿರುವ ʼಚಂದ್ರಯಾನ-3ʼ ಬಗೆಗಿನ ಇಂತಹ ಟ್ವೀಟ್ ಗೆ ನೆಟ್ಟಿಗರು ಗರಂ ಆಗಿದ್ದಾರೆ.
ಇದು “ಕುರುಡು ದ್ವೇಷ’ʼ ವೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ಜೀ, ಈ ಚಂದ್ರಯಾನ್ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಿಂದಲ್ಲ. ಅದು ಯಶಸ್ವಿಯಾದರೆ ಅದು ಯಾವುದೇ ಪಕ್ಷಕ್ಕೆ ಅಲ್ಲ ಭಾರತಕ್ಕೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇದು ಐತಿಹಾಸಿಕ ಕ್ಷಣವಾಗಿದೆ. ಇಂತಹ ಸಾಧನೆ ಮಾಡುತ್ತಿರುವವರಲ್ಲಿ ನಾವು ನಾಲ್ಕನೇಯವರು. ಇದರಲ್ಲಿರುವುದು ನಮ್ಮದೇ ಜನ ಹಾಗೂ ತಂತ್ರಜ್ಞಾನ. ಮೋದಿಜಿಯ ಮೇಲಿನ ಕುರುಡು ದ್ವೇಷದಲ್ಲಿ #ಚಂದ್ರಯಾನ3 ಅನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು. ಇದನ್ನು ಯಶಸ್ವಿಗೊಳಿಸಲು ತಮ್ಮ ಜೀವಮಾನದ ವರ್ಷಗಳನ್ನು ಹಾಕಿರುವ ನಮ್ಮ ವಿಜ್ಞಾನಿಗಳನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಮತ್ತೊಬ್ಬರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.