ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ʼತಾತʼನಾಗಿ ಕಾಣಿಸಿಕೊಂಡಿದ್ದ ಕೃಷ್ಣಾಜಿ ರಾವ್ ಅನಾರೋಗ್ಯದಿಂದ ಬುಧವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೆಸರು; ಕೆಸಿಆರ್ ಪುತ್ರಿ ಕವಿತಾ ಆಕ್ರೋಶ
ರಾಕಿಂಗ್ ಸ್ಟಾರ್ ಯಶ್ ಅವರ ʼಕೆಜಿಎಫ್ʼ ಸಿನಿಮಾದಲ್ಲಿ ತಾತನಾಗಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಕೃಷ್ಣಾಜಿ ರಾವ್ ತಮ್ಮ ಸಂಬಂಧಿಕರ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಸದ್ಯ ಅವರು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕೃಷ್ಣಾಜಿ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದ್ದು, ಅವರನ್ನು ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಕೃತಕ ಉಸಿರಾಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Related Articles
ಕೆಜಿಎಫ್ ಸಿನಿಮಾದ ಬಳಿಕ ಹಲವರು ಸಿನಿಮಾಗಳಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದಾರೆ. ಇತ್ತೀಚೆಗೆ ಸೆಟ್ಟೇರಿದ್ದ ‘ನ್ಯಾನೊ ನಾರಾಯಣಪ್ಪ’ ಎಂಬ ಸಿನಿಮಾಕ್ಕೆ ಕೃಷ್ಣಾಜಿ ಅವರೇ ನಾಯಕರಾಗಿದ್ದಾರೆ.