Advertisement

‌Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್

12:05 PM Jun 01, 2024 | Team Udayavani |

ಹೈದರಾಬಾದ್:‌ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುವ ತೆಲುಗು ನಟ ಬಾಲಕೃಷ್ಣ ಇತ್ತೀಚೆಗೆ ನಟಿಯೊಬ್ಬರನ್ನು ವೇದಿಕೆಯಲ್ಲಿ ದೂಡಿದ ಘಟನೆಗೆ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಇತ್ತೀಚೆಗೆ ವಿಶ್ವಕ್‌ ಸೇನ್‌ ಅಭಿನಯಿಸಿರುವ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ಅಂಜಲಿ ಹಾಗೂ ನೇಹಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.

ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಆಗಮಿಸಿದ ವೇಳೆ ಬಾಲಕೃಷ್ಣ ನಟಿ ಅಂಜಲಿ ಅವರನ್ನು ಒಮ್ಮೆಗೆ ದೂಡಿದ್ದರು. ಇದರಿಂದ ಒಂದು ಕ್ಷಣಕ್ಕೆ ಒಳಗಾದ ನಟಿ ಅದನ್ನು ತೋರಿಸದೆ ನಕ್ಕು ಸುಮ್ಮನಾಗಿದ್ದರು.

ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಬಾಲಕೃಷ್ಣ ಅವರು ದರ್ಪ ಮೆರೆದಿದ್ದಾರೆ ಅಂಥ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಇದಾದ ಬಳಿಕ ನಟಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದರು. “ನಾವು ಬಹಳ ಸಮಯದಿಂದ ಪರಸ್ಪರ ಉತ್ತಮ ಸ್ನೇಹದ ಜೊತೆ ಗೌರವವನ್ನು ಹೊಂದಿದ್ದೇವೆ” ಎಂದು ಹೈ-ಫೈವ್‌ ಮಾಡುವ ವಿಡಿಯೋವನ್ನು ಹಂಚಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದಾರೆ.

Advertisement

ಈ ವಿವಾದ ತಣ್ಣಗೆ ಆಗುತ್ತಿದೆ ಎನ್ನುವಾಗಲೇ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ನಟ ವಿಶ್ವಕ್‌ ಸೇನ್‌ ನಟಿ ಅಂಜಲಿ ಅವರನ್ನು ಮಾತನಾಡಲು ವೇದಿಕೆಗೆ ಕರೆದಿದ್ದಾರೆ. ಈ ವೇಳೆ ನಟಿ ಅಂಜಲಿ ಬಾಲಕೃಷ್ಣ ಅವರ ಪಕ್ಕದಲ್ಲಿ ಕೂತಿದ್ದರು. ಅಂಜಲಿ ಎದ್ದು ಹೊರಟಾಗ ಆಕೆಯ ಹಿಂಭಾಗಕ್ಕೆ ಬಾಲಕೃಷ್ಣ ಮೆಲ್ಲಗೆ ತಟ್ಟಿದ್ದಾರೆ. ಒಂದು ಕ್ಷಣ ಇದರಿಂದ ಮುಜುಗರಕ್ಕೆ ಒಳಗಾದ ಅಂಜಲಿ ಅದನ್ನು ತೋರ್ಪಡಿಸದೆ ವೇದಿಕೆಯತ್ತ ನಡೆದಿದ್ದಾರೆ.

ಸದ್ಯ ವಿಡಿಯೋ ಕೂಡ ವೈರಲ್‌ ಆಗಿದ್ದು, ಹಿರಿಯ ಬಾಲಯ್ಯ ಅವರ ವರ್ತನೆಗೆ ಅನೇಕರು ಕಿಡಿಕಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next