Advertisement

ತ್ರಿ ಈಡಿಯಟ್ಸ್ ಖ್ಯಾತಿಯ ಬಾಲಿವುಡ್ ನಟ ಅರುಣ್ ಬಾಲಿ ನಿಧನ

09:23 AM Oct 07, 2022 | Team Udayavani |

ಮುಂಬೈ: ಬಾಲಿವುಡ್‌ ನ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಮಿಂಚಿದ್ದ ಹಿರಿಯ ನಟ ಅರುಣ್ ಬಾಲಿ ಇಂದು ನಿಧನರಾದರು. 79 ವರ್ಷದ ಅವರು ಮುಂಬೈನಲ್ಲಿ ನಿಧನರಾದರು.

Advertisement

ಅರುಣ್‌ ಬಾಲಿ ಅವರು ಕೆಲ ಸಮಯದಿಂದ ಅಪರೂಪದ ನರಸ್ನಾಯುಕ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್‌ ನಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ಅವರನ್ನು ಮುಂಬೈನ ಹಿರ್ನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರುಣ್ ಬಾಲಿ ಅವರ ಪುತ್ರಿಯರಿಬ್ಬರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ನಾಳೆ (ಅಕ್ಟೋಬರ್ 8) ಬರಲಿದ್ದು, ನಂತರ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ವರದಿಯಾಗಿದೆ.

ಇದನ್ನೂ ಓದಿ:ಕೈ ತಪ್ಪಿದ ಔಟ್‌ಬೋರ್ಡ್‌ ಎಂಜಿನ್‌ ಸಹಾಯಧನ : ನಾಡದೋಣಿ ಮೀನುಗಾರರ ಸಂಕಷ್ಟ

ಅರುಣ್ ಬಾಲಿ ಅವರು 3 ಈಡಿಯಟ್ಸ್, ಕೇದಾರನಾಥ್, ಪಾಣಿಪತ್, ಹೇ ರಾಮ್, ದಂಡ್ ನಾಯಕ್, ರೆಡಿ, ಜಮೀನ್, ಪೋಲೀಸ್ ವಾಲಾ ಗುಂಡಾ, ಫೂಲ್ ಔರ್ ಅಂಗಾರ್, ಮತ್ತು ರಾಮ್ ಜೇನ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.  ಅರುಣ್ ಬಾಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕರೂ ಹೌದು.

Advertisement
Advertisement

Udayavani is now on Telegram. Click here to join our channel and stay updated with the latest news.

Next