ನವದೆಹಲಿ: ಕೇಂದ್ರದ ಕೃಷಿ ನೀತಿಯನ್ನು ವಿರೋಧಿಸಿ ನಡೆಯುತ್ತಿರುವ ರೈತಚಳುವಳಿ ಕುರಿತು ಸರ್ಕಾರವನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನಟ ಹಾಗೂ ಬಿಜೆಪಿಯ ಸಂಸದರು ಆಗಿರುವ ಸನ್ನಿ ಡಿಯೋಲ್ ಅವರಿಗೆ ಕೇಂದ್ರ ಸರ್ಕಾರ ‘Y’ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ.
ದೆಹಲಿಯಲ್ಲಿ ರೈತ ಚಳವಳಿ ಆರಂಭಗೊಂಡ ನಂತರ ಹಲವು ಸಿನಿಮಾ ನಟರು ಹಾಗೂ ರಾಜಕಾರಣಿಗಳು ಬಾರಿ ಸುದ್ದಿಯಲ್ಲಿದ್ದು, ಇದೀಗ ಈ ಸಾಲಿನಲ್ಲಿ ಸನ್ನಿ ಡಿಯೋಲ್ ಕೂಡಾ ಸೇರಿಕೊಂಡಿದ್ದಾರೆ.
ರೈತ ಚಳುವಳಿಯ ಕುರಿತಾಗಿ ಟ್ವೀಟ್ ಮಾಡಿರುವ ಸನ್ನಿ ಡಿಯೋಲ್ ನಾನು ಇಡಿ ವಿಶ್ವದ ಎದುರು ಮನವಿ ಮಾಡುವುದು ಏನೆಂದರೆ ಇದು ರೈತರು ಮತ್ತು ಭಾರತ ಸರ್ಕಾರದ ನಡುವಿನ ವಿಚಾರವಾಗಿದೆ. ಈ ವಿಚಾರದಲ್ಲಿ ಇನ್ಯಾರೂ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ. ಹಲವಾರು ಜನರು ಅವರವರ ಸ್ವ ಹಿತಾಸಕ್ತಿಗಾಗಿ ಹಾಗೂ ತಮ್ಮ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ನಾನು ಸರ್ಕಾರದ ಪರವಾಗಿದ್ದೇನೆ. ಸರ್ಕಾರ ಸದಾ ರೈತರ ಪರವಾಗಿದೆ. ರೈತರ ಅಭಿವೃದ್ದಿಗಾಯೇ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮ ರೈತರ ಬದುಕು ಚೆನ್ನಾಗಿರಬೇಕು ಎಂಬುವುದೇ ನನ್ನ ಆಶಯ ಎಂದಿದ್ದರು
ಇದನ್ನೂ ಓದಿ:ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಫೈರಿಂಗ್ ಪ್ರಕರಣ: ಸಮಸ್ಯೆ ಬಗೆಹರಿಸಲಾಗುವುದು ಎಂದ ಡಿಕೆಶಿ
ಪಂಬಾಬಿನವರೆ ಆಗಿರುವ ಸನ್ನಿ ಡಿಯೋಲ್ ಅವರು ರೈತರ ಪರ ನಿಲ್ಲದೆ ಸರ್ಕಾರದ ಪರ ನಿಂತು ರೈತ ಮಸೂದೆಯನ್ನು ಬೆಂಬಲಿಸಿರುವುದು ಹಲವರ ಆಕ್ರೋಶಕ್ಕೆ ಎಡೆಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇವರಿಗೆ ‘Y’ ಶ್ರೇಣೀಯ ಭದ್ರತೆ ಒದಗಿಸಿದೆ ಎಂದು ವರದಿಯಾಗಿದೆ.
ಈ ‘Y’ ಶ್ರೇಣಿಯ ಭದ್ರತೆಯಲ್ಲಿ ಸನ್ನಿ ಡಿಯೋಲ್ ಅವರ ಜೊತೆ ಒಟ್ಟು 11 ಜನ ಭದ್ರತಾ ಸಿಬ್ಬಂದಿಗಳಿದ್ದು,ಎರಡು ಜನ ಕಮ್ಯಾಂಡೊಗಳು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿದೆ.