Advertisement

ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಲೀಕ್

11:44 AM Nov 06, 2021 | Team Udayavani |

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಚಿತ್ರ ‘ಸೂರ್ಯವಂಶಿ’ ನವೆಂಬರ್ 5 ರಂದು ಬಿಡುಗಡೆಯಾಗಿದೆ. ಆದರೆ, ದುರಾದೃಷ್ಟ ಎಂದರೆ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ಲೀಕ್ ಆಗಿದೆ.

Advertisement

ಅಕ್ಷಯ್ ಕುಮಾರ್ ಸಿನಿಮಾ ‘ಸೂರ್ಯವಂಶಿ’ ಪೈರಸಿಯ ಹೊಡೆತಕ್ಕೆ ಸಿಲುಕಿದ್ದು, ಟೆಲಿಗ್ರಾಮ್ ಹಾಗೂ ತಮಿಳ್‍ರಾಕರ್ಸ್ ಸೈಟ್‍ನಲ್ಲಿ ಈ ಸಿನಿಮಾದ ಹೆಚ್‍ಡಿ ಪ್ರಿಂಟ್ ಹರಿದಾಡುತ್ತಿದೆ.

‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರ ತಂಡ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಇದನ್ನೂ ಓದಿ: “ಮುಳ್ಳ ಮುಟ್ಟೆ ಆಚರಣೆ ತುಳು ಸಂಸ್ಕೃ ತಿಯ ಗಟ್ಟಿತನ’

ನವೆಂಬರ್ 4 ರಂದು ಬಿಡುಗಡೆಯಾದ ರಜನಿಕಾಂತ್ ನಟನೆಯ ಅಣ್ಣಾಥೆ ಹಾಗೂ ಒಟಿಟಿಯಲ್ಲಿ ರಿಲೀಸ್ ಆದ ಸೂರ್ಯ ಅಭಿನಯದ “ಜೈ ಭೀಮ್’ ಕೂಡ ಪೈರಸಿ ಹೊಡೆತಕ್ಕೆ ಸಿಲುಕಿದೆ.

Advertisement

‘ಸೂರ್ಯವಂಶಿ’ ಸಿನಿಮಾ ಪೈರಸಿಯ ಹೊಡೆತಕ್ಕೆ ಸಿಕ್ಕಿದ್ದರೂ, ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಆದರೆ, ಸಿನಿಮಾ ಆನ್​ಲೈನ್​ನಲ್ಲಿ ಲೀಕ್​ ಆಗಿದ್ದು ಚಿತ್ರದ ಕಲೆಕ್ಷನ್​ಗೆ ಹೊಡೆತ ಕೊಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next