Advertisement

ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಿ

12:19 PM Mar 03, 2019 | |

ಹೊಳಲ್ಕೆರೆ: ಪಟ್ಟಣದ ಗಣಪತಿ ಕಲ್ಯಾಣ ಮಂಟಪದ ಬಳಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಕಮಲ ಸಂಕಲ್ಪ ಬೈಕ್‌ ರ್ಯಾಲಿಗೆ ಶನಿವಾರ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಬಲಪಡಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತರು ಪ್ರಧಾನಿ ಮೊದಿ ನೇತೃತ್ವದ ಕೇಂದ್ರ ಸರಕಾರ ದೇಶದ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಹೇಶ್‌, ಕಾರ್ಯದರ್ಶಿ ಜಗದೀಶ್‌, ಜಿಪಂ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಎಲ್‌.ಬಿ.ರಾಜಶೇಖರ್‌, ರಾಮಗಿರಿ ರಾಮಣ್ಣ, ಯುವಕ ಘಟಕದ ಅಧ್ಯಕ್ಷ ಆಶೋಕ್‌, ಉಪಾಧ್ಯಕ್ಷ ವಿಕಾಸ್‌, ನಗರಾಧ್ಯಕ್ಷ ಬಸವರಾಜ್‌, ಮಹೇಶ್‌, ಕೆ.ಆರ್‌.ರಾಜಪ್ಪ, ಬಸವರಾಜ್‌ ಯಾದವ್‌ ಇನ್ನಿತರರಿದ್ದರು. ಗಣಪತಿ ಕಲ್ಯಾಣ ಮಂಟಪದಿಂದ ಆರಂಭವಾದ ಬೈಕ್‌ ರ್ಯಾಲಿ ತಾಲೂಕಿನ ಗುಂಡೇರಿ,
ಎನ್‌.ಜಿ.ಹಳ್ಳಿ, ರಾಮಗಿರಿ, ದುಮ್ಮಿ, ದೊಗ್ಗನಾಳ್‌, ಮಲ್ಲಾಡಿಹಳ್ಳಿ, ಶಿವಪುರ, ಚಿಕ್ಕಜಾಜೂರು, ಅರಸನಘಟ್ಟ, ಚಿಕ್ಕಂದವಾಡಿ, ಅಮೃತಪುರ ಚಿತ್ರಹಳ್ಳಿ, ಶಿವಗಂಗ, ತಾಳ್ಯ, ಕಣಿವೆ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿತು.

Advertisement

Udayavani is now on Telegram. Click here to join our channel and stay updated with the latest news.

Next