Advertisement

ಬಿಂದಿ ಧರಿಸದ ಕಾರಣಕ್ಕೆ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ

12:04 PM Nov 03, 2022 | Team Udayavani |

ಮುಂಬೈ: ಬಲಪಂಥೀಯ ನಾಯಕ ಸಂಭಾಜಿ ಭಿಡೆ ಅವರು ಮಹಿಳಾ ದೂರದರ್ಶನ ಸುದ್ದಿ ವರದಿಗಾರ್ತಿಯೊಬ್ಬರು ಹಣೆಯಲ್ಲಿ ‘ಬಿಂದಿ’ ಹಾಕದ ಕಾರಣ ಮಾತನಾಡಲು ನಿರಾಕರಿಸಿದ ಘಟನೆ ನಡೆದಿದೆ.

Advertisement

ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾದ ವೇಳೆ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಿಂಧೆ ಭೇಟಿಯ ಬಗ್ಗೆ ಪ್ರತಿಕ್ರಿಯೆ ಕೇಳಲು ಟಿವಿ ಪತ್ರಕರ್ತೆ ಭಿಡೆ ಬಳಿ ಬಂದಾಗ ಈ ಘಟನೆ ನಡೆದಿದೆ. ಪತ್ರಕರ್ತೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಂಭಾಜಿ ಭಿಡೆ, ಮೊದಲು ಬಿಂದಿ ಇರಿಸಿ ಬರುವಂತೆ ಸೂಚಿಸಿದ್ದಾರೆ.

ಮಹಿಳೆಯರು ಭಾರತ ಮಾತೆಯನ್ನು ಹೋಲುತ್ತಾರೆ. ಹೀಗಾಗಿ ಬಿಂದಿಗೆ ಇಡದೆ ‘ವಿಧವೆ’ ಯಂತೆ ಕಾಣಿಸಿಕೊಳ್ಳಬಾರದು ಎಂದು ಅವರು ಪತ್ರಕರ್ತೆಗೆ ಸೂಚಿಸಿದರು.

ಇದನ್ನೂ ಓದಿ:ಕನ್ನಡಿಗನಿಗೆ ಕೈಕೊಟ್ಟ ಕಿಂಗ್ಸ್: ಪಂಜಾಬ್ ಗೆ ನೂತನ ನಾಯಕನ ನೇಮಕ

Advertisement

ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಬಲಪಂಥೀಯ ನಾಯಕನ ಈ ಹೇಳಿಕೆಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next