ನವ ದೆಹಲಿ : ಸಾಮಾಜಿಕ ಜಾಲತಾಣಗಳನ್ನು ಸರ್ಕಾರ ಗೌರವಿಸುತ್ತದೆ. ಆದರೇ, ಸುಳ್ಳು ಸುದ್ದಿಗಳನ್ನು ಹಬ್ಬಿಸುವಂತಹ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಓದಿ : ಮಣಿಪಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಾವಿನ ಮರಕ್ಕೆ ತಗಲಿದ ಬೆಂಕಿ
“ಸಾಮಾಜಿಕ ಜಾಲತಾಣಗಳು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದೆ. ನಮ್ಮ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿಯೂ ದೊಡ್ಡ ಪಾತ್ರವಹಿಸಿದೆ. ಆದರೇ, ಸಾಮಾಜಿಕ ಜಾಲತಾಣಗಳು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳು, ಪ್ರಚೋದನಾತ್ಮಕ ವಿಚಾರಗಳನ್ನು ಹರಡಿಸುವ ಕೆಲಸ ಮಾಡಿದರೆ ಸರ್ಕಾರ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತದೆ” ಎಂದು ಪ್ರಸಾದ್ ಗುರುವಾರ(ಫೆ. 11) ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಇನ್ನು, ಕೇಂದ್ರ ಸರ್ಕಾರದ “ಲೀಗಲ್ ರಿಕ್ವೆಸ್ಟ್” ಗೆ ಪ್ರತಿಕ್ರಿಯೆಯಾಗಿ ಟ್ವೀಟರ್, ನಿಯಮಗಳ ಉಲ್ಲಂಘನೆಗಾಗಿ 500 ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಅದಾಗ್ಯೂ, ನಕಲಿ ಹಾಗೂ ಆಟೊಮೇಟೆಡ್ ಬ್ವಾಟ್ ಖಾತೆಗಳಿಗೆ ಅನುಮತಿಸುವ ವಿಧಾನವು ಸಂಸ್ಥೆ ಹೇಳಿದ ಬದ್ಧತೆಯ ಬಗ್ಗೆ ಅನುಮಾನವನ್ನು ಹುಟ್ಟಿಸುತ್ತದೆ ಎಂದು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳ ದೈತ್ಯ ಟ್ವೀಟರ್ ಸಂಸ್ಥೆಯ ಅಧಿಕಾರಿ ವರ್ಗಕ್ಕೆ ಹೇಳಿದೆ.
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ ಹಾಗೂ ಟ್ವೀಟರ್ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ, “farmer genocide” ಹ್ಯಾಶ್ ಟ್ಯಾಗ್ ಬಳಸಿ ಕೇಂದ್ರದ ಕೃಷಿ ಕಾನೂನುಗಳ ಬಗ್ಗೆ ಅಪಪ್ರಚಾರ, ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ಖಲಿಸ್ತಾನಿ ಬೆಂಬಲಿತ ಟ್ವೀಟರ್ ಖಾತೆಗಳನ್ನು ಸ್ಥಗಿತಗೊಳಿಸಿ ಎಂದು ಟ್ವೀಟರ್ ಗೆ ಕೇಂದ್ರ ಸೂಚಿಸಿತ್ತು.
ಓದಿ : ಲಡಾಖ್: ಚೀನಾಕ್ಕೆ ಒಂದಿಂಚೂ ಜಾಗವನ್ನು ಭಾರತ ಬಿಟ್ಟುಕೊಟ್ಟಿಲ್ಲ: ರಾಜ್ಯಸಭೆಯಲ್ಲಿ ರಾಜನಾಥ್