Advertisement

ಪಕ್ಷದ ಕಾರ್ಯಕರ್ತರ ಹಿತ ಕಾಪಾಡಲು ಕ್ರಮ

07:36 AM Jul 01, 2020 | Lakshmi GovindaRaj |

ಚನ್ನರಾಯಪಟ್ಟಣ: ಕಾಂಗ್ರೆಸ್‌ ಪಕ್ಷದಲ್ಲಿ ವರಿಷ್ಠರು ನೀಡುವ ಚೀಟಿಗೆ ಬೆಲೆ ನೀಡುವ ಕಾಲ ಹೋಗುತ್ತಿದೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಗೆ ಬೆಲೆ ದೊರೆ ಯುವ ಕಾಲ ಸನಿಹವಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ  ಎಂ.ಎ.ಗೋಪಾಲಸ್ವಾಮಿ ತಿಳಿಸಿದರು. ಡಿ.ಕೆ.ಶಿವಕುಮಾರ್‌ ಪದಗ್ರಹಣದ ಅಂಗವಾಗಿ ಪುರಸಭಾ ಸದಸ್ಯರು ಹಾಗೂ ಪಟ್ಟಣದಲ್ಲಿನ ಕಾಂಗ್ರೆಸ್‌ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪಕ್ಷದಲ್ಲಿ ದುಡಿಯುವ  ಕಾರ್ಯಕರ್ತ ಮೂಲೆ ಗುಂಪಾಗುತ್ತಿದ್ದಾನೆ. ಮುಖಂಡರು ಹಿಡಿತ ಸಾಧಿಸುತ್ತಿದ್ದಾರೆಂಬ ಆರೋಪ ನಿವಾರಿಸಲು ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮುಂದಾಗಲಿದ್ದಾರೆ ಎಂದರು. ಮುಖಂಡರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇದರಿಂದ ಕೆಳ ಮಟ್ಟದ ಕಾರ್ಯಕರ್ತರಿಗೆ ತೊಂದರೆ ಆಗುತ್ತಿದೆ ಎಂಬ ಕೂಗು ಮೈಸೂರು ಭಾಗದಲ್ಲಿ ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಎಂದಿಗೂ ಇತರ ಪಕ್ಷದೊಂದಿಗೆ  ಹೊಂದಾಣಿಕೆ ಮಾಡಿಕೊಳ್ಳಲು ಸಿದಟಛಿವಿಲ್ಲ ನಮಗೆ ಕಾರ್ಯಕರ್ತರು ಮುಖ್ಯ ಹೊರತು ಅಧಿಕಾವರಲ್ಲ ಎಂದು ನುಡಿದರು. ಕೋವಿಡ್‌ 19ದಿಂದ ಡಿಕೆಶಿ ಪದಗ್ರಹಣ ಪ್ರತಿ ಗ್ರಾಮಕ್ಕೆ ತಲುಪುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯನ್ನು ವೀಕ್ಷಕರೊಂದಿಗೆ ಮುಖಂಡರು ಸಂಚಾರ ಮಾಡಿ ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಕೆಪಿಸಿಸಿ ನೂತನ ಸಾರಥಿಗಳ ಕಾರ್ಯಕ್ರಮ ತಲುಪುವಂತೆ ಮಾಡಲು ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ  ಸಿ.ಎಸ್‌.ಪುಟ್ಟೇಗೌಡ, ಬ್ಲಾಕ್‌ ಕಾಂಗ್ರೆಸ್‌ ಮುಖಂಡ ರಾಮಚಂದ್ರ, ಎಪಿಎಂಸಿ ನಿರ್ದೇಶಕ ಎಂ.ಶಂಕರ್‌, ಯುವ ಮುಖಂಡರಾದ ಕಾರ್ತೀಕ್‌, ಕಿರಣ್‌, ಕಿಶೋರ, ಮೋಹನ್‌, ವೀಕ್ಷಕರಾದ ಕಮಲಾಕ್ಷಿ, ಕ್ಷೇತ್ರದ ಉಸ್ತುವಾರಿ ಸಂಜಯಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next