Advertisement

ಆಕ್ಸಿಜನ್ ಕೊರತೆ ಆಗದಂತೆ ಕ್ರಮ

07:34 PM Apr 26, 2021 | Team Udayavani |

ತುಮಕೂರು: ಪ್ರಸ್ತುತ ಜಿಲ್ಲೆಯಲ್ಲಿಬರುತ್ತಿರುವ ಪಾಸಿಟಿವ್‌ ಪ್ರಕರಣಗಳಲ್ಲಿಶೇ.5ರಷ್ಟು ಮಂದಿಗೆ ಆಕ್ಸಿಜನ್‌ ಅಗತ್ಯಇರುವವರು ಇದ್ದಾರೆ. ಇವರಿಗೆಆಕ್ಸಿಜನ್‌ ಕೊರತೆ ಆಗದಂತೆ ಸರ್ಕಾರಿಆಸ್ಪತ್ರೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

Advertisement

ನಗರದಲ್ಲಿ ವಾರಾಂತ್ಯ ಲಾಕ್‌ಡೌನ್‌ಪರಿಶೀಲಿಸಿದ ನಂತರ ಟೌನ್‌ಹಾಲ್‌ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಜಾರಿಗೊಳಿಸಿರುವ ವೀಕೆಂಡ್‌ ಕರ್ಫ್ಯೂಮತ್ತು ರಾತ್ರಿ ಕರ್ಫ್ಯೂವನ್ನು ಪಾಲಿಸುವಮೂಲಕ ಕೊರೊನಾ ಸೋಂಕು ತಡೆಗೆಸಹಕರಿಸಬೇಕು.

ಹಾಗೆಯೇ ಖಾಸಗಿಆಸ್ಪತ್ರೆಗಳಲ್ಲೂ ಕೋವಿಡ್‌ ರೋಗಿಗಳಿಗೆಸೂಕ್ತ ಚಿಕಿತ್ಸೆ ದೊರೆಯುವಂತೆ ಸೂಚಿಸಲಾಗಿದೆ ಎಂದರು.ಜಿಲ್ಲೆಯ 10 ತಾಲೂಕುಗಳಲ್ಲೂಕೋವಿಡ್‌ ಕೇರ್‌ ಸೆಂಟರ್‌ಗಳನ್ನುಪ್ರಾರಂಭಿಸಲು ನಿರ್ಧರಿಸಲಾಗಿದೆ.

ಮುಂದಿನ ಮೂರು ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆರಂಭಿಸಲುಕ್ರಮ ಕೈಗೊಳ್ಳಲಾಗುವುದು. ಎಲ್ಲತಾಲೂಕು ಕೇಂದ್ರಗಳಲ್ಲೂ 50ಹಾಸಿಗೆಯಂತೆ 450 ಆಕ್ಸಿಜನ್‌ ಬೆಡ್‌ವ್ಯವಸ್ಥೆಗೆ ಸಿದ್ದತೆ ಮಾಡಲಾಗಿದೆ ಎಂದರು.ಸರ್ಕಾರಿ ಆಸ್ಪತ್ರೆಗಳಿಗೆ ಬರುವರೆಮಿಡಿಸಿವಿಯರ್‌ ಲಸಿಕೆಗಳಿಗೆ ಸರ್ಕಾರಿಸೀಲ್‌ ಹಾಕಲಾಗಿರುತ್ತದೆ.

ಈ ಲಸಿಕೆದುರುಪಯೋಗ ವಾಗದಂತೆ ಅಗತ್ಯಇರುವವರಿಗೆ ನೀಡಲು ಕ್ರಮವಹಿಸುವಂತೆ ಆರೋಗ್ಯಾಧಿಕಾರಿಗಳಿಗೆಸೂಚನೆ ನೀಡಲಾಗಿದೆ. ಆಕ್ಸಿಜನ್‌ ಅಗತ್ಯಇರುವವರಿಗೆ 24 ಗಂಟೆ ಮುನ್ನವೇವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇಸಚಿವರು ತಿಳಿಸಿದ್ದಾರೆ.

Advertisement

ಹಾಗೆಯೇ 9ಅಗತ್ಯ ಸೇವೆಗಳ ಕಾರ್ಖಾನೆಗಳಿಗೆಆಕ್ಸಿಜನ್‌ ಪೂರೈಸಲು ಮಾತ್ರ ಅವಕಾಶನೀಡಲಾಗಿದೆ ಎಂದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಡಾ. ಕೆ. ವಂಶಿಕೃಷ ¡ ಮಾತನಾಡಿ,ನಗರದ ಆಯಕಟ್ಟಿನ ಸ್ಥಳಗಳಲ್ಲಿ18ರಿಂದ 19 ಚೆಕ್‌ಪೋಸ್ಟ್‌ ಆರಂಭಿಸಲಾಗಿದೆ.

ಈಗಾಗಲೇ ಮಾರ್ಗ ಸೂಚಿಅನ Ìಯ ಏನೇನು ಕ್ರಮ ಕೈಗೊಳ್ಳಬೇಕುಎಂದು ತಿಳಿಸ ಲಾಗಿದೆ. ಈಗಾಗಲೇಜಿಲ್ಲಾ ಉಸ್ತುವಾರಿ ಸಚಿವರು ಸಹ ಈಸಂಬಂಧ ಸೂಚನೆ ನೀಡಿದ್ದಾರೆ.ಅನಾವಶ್ಯಕವಾಗಿ ಓಡಾಡುತ್ತಿರುವವಾಹನಗಳ ತಪಾಸಣೆ ನಡೆಸಿ ಜಪ್ತಿಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ವಿನಾ ಕಾರಣ ರಸೆ ¤ಗಿಳಿಯಬಾರದು ಎಂದರು. ಅಪರಜಿಲ್ಲಾಧಿಕಾರಿ ಚನ್ನಬಸಪ ³, ಉಪ ವಿಭಾಗಾಧಿಕಾರಿ ಅಜಯ್‌ ಹಾಗೂಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next