Advertisement
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ| ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಲಿಖೀತ ವಾದ ಮಂಡಿಸಿದ ಸರಕಾರದ ಪರ ವಕೀಲರು ಈ ಮಾಹಿತಿ ಒದಗಿಸಿದರು.
– ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಲು ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005ರ ಪ್ರಕಾರ ರಾಜ್ಯ ಸರಕಾರ ಈಗಾಗಲೇ ನೇಮಕಗೊಳಿಸಿರುವ 18 ಜನ ಸಂರಕ್ಷಣ ಅಧಿಕಾರಿಗಳಿಗೆ ಸದ್ಯದ ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
Related Articles
Advertisement
– ಕೌಟುಂಬಿಕ ದೌರ್ಜನ್ಯ ಪೀಡಿತ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಕಾನೂನು ನೆರವು ಮತ್ತು ವೈದ್ಯಕೀಯ ನೆರವು ಒದಗಿಸಲು ರಾಜ್ಯ ಸರಕಾರ “ಸಾಂತ್ವನ’ ಯೋಜನೆ ಜಾರಿಗೆ ತಂದಿದೆ. ಸದ್ಯ ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ 193 ಸಾಂತ್ವನ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಫೋನ್ ಮೂಲಕ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈ ವರೆಗೆ ಸಾಂತ್ವನ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯಗಳಿಗೆ ಸಂಬಂಧಿಸಿದ 315 ಕರೆಗಳನ್ನು ಸ್ವೀಕರಿಸಲಾಗಿದ್ದು, ಮಾರ್ಗದರ್ಶನ ಮಾಡಲಾಗಿದೆ.
– ಕೇಂದ್ರ ಸರಕಾರದ ಸಾರ್ವತ್ರಿಕ ಮಹಿಳಾ ಸಹಾಯವಾಣಿ-181 ಯೋಜನೆಯಡಿ ಆರೋಗ್ಯ ಇಲಾಖೆಯ ನೆರವಿನೊಂದಿಗೆ ಬೆಂಗಳೂರಿನ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜ್ಯದ ಹೆಲ್ಪ್ ಲೈನ್ ತೆರೆಯಲಾಗಿದೆ. ಈ ಹೆಲ್ಪ್ಲೈನ್ ಆರೋಗ್ಯ ಸಹಾಯವಾಣಿ-104 ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಈ ಹೆಲ್ಪ್ಲೈನ್‌ಗೆ ಮಾ.23ರಿಂದ ಎ.21ರ ವರೆಗೆ 1,194 ಕರೆಗಳು ಬಂದಿದ್ದು, ಅದರಲ್ಲಿ 162 ಕರೆಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದವುಗಳಾಗಿವೆ.
– ಕೌಟುಂಬಿಕ ದೌರ್ಜನ್ಯ ಪೀಡಿತ ಹೆಣ್ಣು ಮಕ್ಕಳಿಗೆ ಸಾಂತ್ವನ ಕೇಂದ್ರಗಳ ಮೂಲಕ ತಜ್ಞರಿಂದ ಆಪ್ತ ಸಮಾ ಲೋಚನೆ ಮಾಡಿಸಲಾಗುತ್ತಿದೆ. ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು “ಸ್ವಧಾರ ಗೃಹ’ ಹೆಸರಲ್ಲಿ ತಾತ್ಕಾಲಿಕ ಶೆಲ್ಟರ್ ವ್ಯವಸ್ಥೆ ಮಾಡಲಾಗಿದೆ.
ಕಾನೂನು ನೆರವು ಒದಗಿಸಲು ವಕೀಲರ ನೇಮಕರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಎ.11ರಂದು ನೀಡಿರುವ ನಿರ್ದೇಶನದಂತೆ ಕೌಟುಂಬಿಕ ದೌರ್ಜನ್ಯ ಪೀಡಿತ ಮಹಿಳೆಯರು, ಮಕ್ಕಳು, ದುರ್ಬಲ ವರ್ಗದವರಿಗೆ ಕಾನೂನು ನೆರವು ಒದಗಿಸಲು “ಒನ್ ಸ್ಟಾಪ್ ಸೆಂಟರ್’ ಮತ್ತು ಹೆಲ್ಪ್ಲೈನ್ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಟ್ಟದಲ್ಲಿ ತಲಾ ಇಬ್ಬರು ಮಹಿಳಾ ವಕೀಲರನ್ನು ನೇಮಕ ಮಾಡಿ, ಅವರ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ರವಾನಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಡಾ| ನವೀನ್ ಕುಮಾರ್‌ಗೆ ಮನವಿ
ಲಾಕ್‌ಡೌನ್ ಪರಿಣಾಮವಾಗಿ ಮಾನಸಿಕ ಖನ್ನತೆ ಎದುರಿಸುತ್ತಿರುವ ಜನರ ವಿಚಾರವಾಗಿ ಎ.28ರಂದು ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಕೋರ್ಟ್‌ಗೆ ಅಗತ್ಯ ನೆರವು ನೀಡುವಂತೆ ನಿಮ್ಹಾನ್ಸ್‌ನ ಹೆಲ್ಪ್ಲೈನ್ ಜವಾಬ್ದಾರಿ ಹೊತ್ತಿರುವ ಡಾ| ನವೀನ್ ಕುಮಾರ್ ಅವರಿಗೆ ಹೈಕೋರ್ಟ್ ಮನವಿ ಮಾಡಿತು. ಡಾ| ನವೀನ್ ಕುಮಾರ್ ಕೋರ್ಟ್‌ಗೆ ನೆರವು ನೀಡಲು ಸಿದ್ಧರಿದ್ದಾರೆ ಎಂದು ಪಿಯುಸಿಎಲ್ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದರು.