Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಎಲ್ಲ ರಸಗೊಬ್ಬರಗಳಿಗೆ 93127 ಮೆಟ್ರಿಕ್ ಟನ್ ಬೇಡಿಕೆ ಬಂದಿತ್ತು. ಯೂರಿಯಾಗೆ43650 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಆಗಸ್ಟ್‌ವರೆಗೆ 35838 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಸರಬರಾಜು ಮಾಡಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ9750 ಮೆಟ್ರಿಕ್ ಟನ್‌ಯೂರಿಯಾಪೂರೈಸಬೇಕಾಗಿದೆ. ಇದರಲ್ಲಿ ಈಗಾಗಲೇ 3180 ಮೆಟ್ರಿಕ್ ಟನ್ ಪೂರೈಸಲಾಗಿದೆ. ಇನ್ನೂ 6570 ಮೆಟ್ರಿಕ್ ಟನ್ ಪೂರೈಸಲು ಅಗತ್ಯಕ್ರಮ ವಹಿಸಲಾಗಿದೆ ಎಂದರು.
Related Articles
Advertisement
ಸಾವಯವ ಹೆಸರಿನಲ್ಲಿ ಕೆಮಿಕಲ್ಸ್ ಮಾರಾಟ: ಜಿಲ್ಲೆಯಲ್ಲಿ ಸಾವಯವ ಬೆಳೆಗಳ ಹೆಸರಿನಲ್ಲಿ ಕೀಟ ನಾಶಕಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಕೆಮಿಕಲ್ಸ್‌ಗಳನ್ನು ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ವರದಿಯಲ್ಲಿ 10 ಕೆಮಿಕಲ್ಸ್‌ಗಳು ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಮಾರಾಟ ಮಾಡಬೇಕು. ಆದರೆ, ಸಾವಯವ ಹೆಸರಿನಲ್ಲಿ ಮಾರಾಟ ಮಾಡಿದರೆ ಯಾವುದೇ ಅನುಮತಿ ಬೇಕಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಮಂಡ್ಯ 1, ಪಾಂಡವಪುರ 1 ಹಾಗೂ ಕೆ.ಆರ್.ಪೇಟೆಯ 2 ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅವರ ಪರವಾನಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
10.70 ಲಕ್ಷ ಪ್ಲಾಟ್ ಬೆಳೆ ಸರ್ವೆ : ಜಿಲ್ಲೆಯಲ್ಲಿ 16,92,786 ಬೆಳೆ ಪ್ಲಾಟ್ ಇದ್ದು, ಇದುವರೆಗೂ 10.70 ಲಕ್ಷ ಪ್ಲಾಟ್ ಬೆಳೆ ಸರ್ವೆ ಮಾಹಿತಿ ದಾಖಲಿಸಲಾಗಿದೆ. ಸೆ.23ರವರೆಗೆ ರೈತರು ತಮ್ಮ ಮೊಬೈಲ್ ಆಪ್ ಮೂಲಕ ಬೆಳೆ ಸರ್ವೆ ನಡೆಸಿ ಮಾಹಿತಿ ನಮೂದಿಸಲು ಅವಕಾಶ ನೀಡಲಾಗಿದೆ. ಇದುವರೆಗೂ 3.89 ಲಕ್ಷ ಪ್ಲಾಟ್‌ಗಳ ಬೆಳೆಯ ಸರ್ವೆಯ ಮಾಹಿತಿಯನ್ನು ರೈತರೇ ಅಪ್‌ಲೋಡ್ ಮಾಡಿದ್ದಾರೆ. 6.70 ಲಕ್ಷ ಪ್ಲಾಟ್ ಬೆಳೆಯ ಸರ್ವೆಯನ್ನು ಖಾಸಗಿ ವ್ಯಕ್ತಿಗಳು ಮಾಡಿದ್ದಾರೆ. ಇನ್ನುಳಿದ6.70 ಲಕ್ಷ ಪ್ಲಾಟ್‌ನ ಬೆಳೆ ಸರ್ವೆ ಕಾರ್ಯ ನಡೆಯುತ್ತಿದೆ. ರೈತರು ಮಾಹಿತಿಯನ್ನು ಸರಿಯಾಗಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಬೆಳೆ ದರ್ಶಕ್ 2020 ಮೊಬೈಲ್ ಆಪ್ ಮೂಲಕ ತಿಳಿದುಕೊಳ್ಳಬಹುದು. ತಪ್ಪಿದ್ದರೆ ಮತ್ತೆ ಸರಿಯಾಗಿ ಅಪ್‌ಡೇಟ್ ಮಾಡಬಹುದಾಗಿದೆ ಎಂದುಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಶೇ.98ರಷ್ಟು ಬಿತ್ತನೆ : ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಶೇ.98ರಷ್ಟು ಬಿತ್ತನೆ ಕಾರ್ಯ ನಡೆದಿದೆ. ರಾಗಿ, ಭತ್ತ, ಮುಸುಕಿನ ಜೋಳ, ಉದ್ದು, ಹೆಸರು, ಆಲಸಂದೆ, ಅವರೆ, ನೆಲಗಡಲೆ, ತನಿ ಕಬ್ಬು, ಕೂಳೆ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಲಾಗಿದೆ. ಕೃಷಿ ಇಲಾಖೆಯಿಂದ 1,96,491 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೂ 1,73,994 ಹೆಕ್ಟೇರ್‌ಪ್ರದೇಶಬಿತ್ತನೆಯಾಗಿದೆ.ಕಳೆದವರ್ಷಇದೇಅವಧಿಯಲ್ಲಿ 1,29,924 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿತ್ತು.
ಶೇ.28.7ರಷ್ಟು ಹೆಚ್ಚು ಮಳೆ : ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.28.7ರಷ್ಟು ಹೆಚ್ಚುವರಿ ಮಳೆಯಾಗಿದೆ. ಏಪ್ರಿಲ್‌ನಿಂದ ಸೆ.21ರವರೆಗೆ ಸರಾಸರಿ ವಾಡಿಕೆ ಮಳೆ 429 ಮಿ.ಮೀ ಇತ್ತು. ಆದರೆ,ಈಬಾರಿ 552.2 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ 485.1, ಮದ್ದೂರು 565.7, ಮಳವಳ್ಳಿ 551.1, ಮಂಡ್ಯ 523.1, ನಾಗಮಂಗಲ 581.3, ಪಾಂಡವಪುರ 584.3, ಶ್ರೀರಂಗಪಟ್ಟಣ 574.6 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.