ಪಾಂಡವಪುರ: ಐತಿಹಾಸಿಕ ಪ್ರವಾಸಿತಾಣ ತೊಣ್ಣೂರುಕೆರೆ ಭರ್ತಿಯಾದ ಹಿನ್ನಲೆಯಲ್ಲಿ ಪತ್ನಿ ನಾಗಮ್ಮ ಜತೆಗೂಡಿ ಶಾಸಕ ಸಿ.ಎಸ್.ಪುಟ್ಟರಾಜುಅವರು ಶುಕ್ರವಾರ ಬಾಗಿನ ಅರ್ಪಿಸಿದರು.
ಪತ್ನಿಯೊಡನೆ ತೊಣ್ಣೂರುಕೆರೆ ಆಗಮಿಸಿದ ಶಾಸಕರು, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿಕೆರೆಗೆ ಬಾಗಿನ ಬಿಟ್ಟರು. ನಂತರ ಮಾತನಾಡಿದ ಅವರು, ಯದುಗಿರಿ ಎಂದೇ ಪ್ರಸಿದ್ಧಿಯಾದ ಮೇಲು ಕೋಟೆಯಲ್ಲಿ ನೆಲೆಸಿದ ಶ್ರೀರಾಮಾನುಜಚಾರ್ಯರು ನಿರ್ಮಾಣ ಮಾಡಿದ ಐತಿಹಾಸಿಕ ತೊಣ್ಣೂರು ಕೆರೆ ಭರ್ತಿಯಾದ ಹಿನ್ನಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ್ದೇನೆ.ಸುಮಾರು 30 ಕೋಟಿ ವೆಚ್ಚದಲ್ಲಿ ತೊಣ್ಣೂರುಕೆರೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ-ಕಾವೇರಿ ನದಿ ನೀರಿನ ಸಂಗಮ: ಮಳೆಯ ನೀರಿನಿಂದಲೇ ಭರ್ತಿಯಾಗುತ್ತಿದ್ದ ತೊಣ್ಣೂರುಕೆರೆಗೆ 1994-95ರಲ್ಲಿ ಹೇಮಾವತಿ ನಾಲೆಯಿಂದ ನೀರು ತುಂಬಿಸುವಕೆಲಸ ಮಾಡಲಾಯಿತು. ನಂತರ ನಾನು ಸಣ್ಣನೀರಾವರಿ ಸಚಿವನಾದ ಬಳಿಕ 200ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದಬಳಘಟ್ಟ ಏತನೀರಾವರಿ ಯೋಜನೆಯಿಂದ ತೊಣ್ಣೂರು ಕೆರೆಗೂ ನೀರು ತುಂಬಿಸುವ ಕೆಲಸಮಾಡಲಾಗಿದೆ. ಐತಿಹಾಸಿಕ ತೊಣ್ಣೂರುಕೆರೆಯಲ್ಲಿ ಹೇಮಾವತಿ ಮತ್ತು ಕಾವೇರಿ ನದಿ ನೀರಿನ ಸಂಗಮವಾಗುತ್ತಿದೆ ಎಂದರು.
ಗೇಟ್ ಅಳವಡಿಕೆ: ಈ ಬಾರಿ ಹೆಚ್ಚಿನ ಮಳೆಯಾಗಿ ತೊಣ್ಣೂರು ಕೆರೆ ಸುಮಾರು 4ಅಡಿಯಷ್ಟು ಹೆಚ್ಚು ನೀರು ಬಂದರೂ ಸಹ ಈಕೆರೆ ಮಹಾನ್ಪುರುಷ ಶ್ರೀರಾಮಾನುಜಚಾರ್ಯರು ನಿರ್ಮಾಣ ಮಾಡಿದ್ದರಿಂದ ಯಾವುದೇ ಅಪಾಯ ಎದುರಾಗುವುದಿಲ್ಲ.ಕೆರೆಯ ರಕ್ಷಣೆಯ ದೃಷ್ಟಿಯಿಂದ ಕೆರೆಯಿಂದಸುಮಾರು 3 ಸಾವಿರ ಕ್ಯೂಸೆಕ್ ಅಧಿಕ ನೀರುಬಂದರೂ ಸುರಕ್ಷಿತವಾಗಿ ಹೊರಹೋಗುವಂತೆ ಕೆಆರ್ಎಸ್ ಮಾದರಿಯಲ್ಲಿ ಗೇಟ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
Related Articles
ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ: ತಾಲೂಕಿನಲ್ಲಿ ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ನೀಡುವ 1 ಲಕ್ಷದ ಪರಿಹಾರದ ಚೆಕ್ನ್ನು ಶಾಸಕ ಸಿ.ಎಸ್.ಪುಟ್ಟರಾಜು ವಿತರಿಸಿದರು. ತಾಲೂಕಿ ನಲ್ಲಿ ಕೋವಿಡ್ನಿಂದ ಮೃತಪಟ್ಟ ಸುಮಾರು 42 ಕುಟುಂಬಗಳಿಗೆ ಚೆಕ್ ವಿತರಣೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಇಒ ಆರ್. ಪಿ.ಮಹೇಶ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್, ಎಚ್ಎಲ್ಬಿಸಿ ಎಇಇ ಪುಟ್ಟಮಾಯಿಗೌಡ, ಟಿಎಚ್ಒ ಡಾ.ಸಿ.ಎ.ಅರವಿಂದ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಎಚ್.ಕುಮಾರ್, ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶನಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಎಸ್.ಪಿ. ಸೌಮ್ಯ, ಅಬಕಾರಿ ನಿರೀಕ್ಷಕಿ ರಮ್ಯಾ, ಗ್ರಾಪಂ ಅಧ್ಯಕ್ಷ ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಚಲುವರಾಜು,ಮುಖಂಡರಾದ ಎಲ್.ಸಿ. ರಾಜು, ಎಚ್ಆರ್ ಎಸ್ ಮಧುಸೂದನ್, ವಿ.ಎಸ್. ನಿಂಗೇಗೌಡ,ದೇಶವಳ್ಳಿ ಪ್ರಭಾಕರ್, ಭಾಸ್ಕರ್, ವೇಣು, ಬಲರಾಮೇಗೌಡ, ಜೆ.ಪಿ.ಶಿವ ಶಂಕರ್, ಜಕ್ಕನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲೋಕೇಶ್ ಸೇರಿದಂತೆ ಗ್ರಾಪಂ ಉಪ ಚುನಾ ವಣೆಯಲ್ಲಿ ಆಯ್ಕೆಯಾದ ಸದಸ್ಯರು ಹಾಜರಿದ್ದರು.
ಕೃಷಿಗೂ ನೀರು ಪೂರೈಕೆ :
ಬಳಘಟ್ಟ ಏತನೀರಾವರಿ ಯೋಜನೆಯ ಎರಡನೇ ಹಂತದ ಯೋಜನೆಯನ್ನು ಧನುರ್ಮಾಸ ಮುಗಿದ ಬಳಿಕ ಚಾಲನೆನೀಡಲಾಗುವುದು. ದುದ್ದ ಹೋಬಳಿಯಕೆರೆಗೆ ನೀರು ತುಂಬಿಸುವ ಯೋಜನೆಗೂ ಇನ್ನೆರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಶ್ಯಾದನಹಳ್ಳಿ ಏತನೀರಾವರಿಯೋಜನೆಗೂ ಶೀಘ್ರವೇ ಚಾಲನೆ ನೀಡಿ ಕೆ.ಬೆಟ್ಟಹಳ್ಳಿ ಗ್ರಾಮ ವ್ಯಾಪ್ತಿಗೆ ಕೃಷಿಗೂನೀರು ಪೂರೈಕೆ ಮಾಡಲಾಗುವುದು ಶಾಸಕ ಪುಟ್ಟರಾಜು ಹೇಳಿದರು.