Advertisement

ಗೊಂದಿ ನೀರಾವರಿ ಯೋಜನೆ ಪೂರ್ಣಕ್ಕೆ ಕ್ರಮ

08:11 PM Nov 16, 2020 | Suhan S |

ಚಿಕ್ಕಮಗಳೂರು: ಗೊಂದಿ  ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಮುಂದಿನ 18 ತಿಂಗಳೊಳಗಾಗಿ ಬೈರಾಪುರ ಪಿಕಪ್‌ನಿಂದ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆಗಳಿಗೆನೀರು ಒದಗಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಮಾಜಿ ಸಚಿವ, ಶಾಸಕ ಸಿ.ಟಿ. ರವಿ ಹೇಳಿದರು.

Advertisement

ನಗರದಲ್ಲಿ ಲಕ್ಯಾ ಹೋಬಳಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯ ಬಯಲುಸೀಮೆ ಪ್ರದೇಶಗಳಿಗೆ ನೀರು ತುಂಬಿಸುವುದು ಬಹಳ ದಿನಗಳ ಕನಸು. ಭದ್ರಾ ಜಲಾಶಯದಿಂದ 197 ಕೆರೆಗಳಿಗೆ ನೀರು ತುಂಬಿಸುವ 1,281.8 ಕೋಟಿ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು ಚಿಕ್ಕಮಗಳೂರು ತಾಲೂಕು ಲಕ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆಗೆ ಬೈರಾಪುರ ಪಿಕಪ್‌ನಿಂದ ನೀರು ಒದಗಿಸುವ ಯೋಜನೆಗೆ ಟೆಂಡರ್‌ ಕರೆಯಲಾಗಿದೆ. ನ.27ಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು ಮುಂದಿನ 18 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನೀರಾವರಿ ಸಮಿತಿ ಅಧ್ಯಕ್ಷ ಎಲ್‌.ಆರ್‌. ಈಶ್ವರಪ್ಪ ಮಾತನಾಡಿ, ಬಯಲುಸೀಮೆ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಸಿ.ಟಿ. ರವಿ ಅವರು, ಮುಖ್ಯಮಂತ್ರಿಗಳೊಂದಿಗೆಚರ್ಚಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿಸಿಕೊಟ್ಟಿರುವುದು ಈ ಭಾಗದ ರೈತರಿಗೆ ಹರ್ಷದಾಯಕ ವಿಷಯ ಎಂದರು. ಕೆರೆಗಳನ್ನು ತುಂಬಿಸುವುದರಿಂದ ಚಿಕ್ಕಮಗಳೂರುತಾಲೂಕು ಹಿರೇಗೌಜ, ಲಕುಮನಹಳ್ಳಿ, ಲಕ್ಯಾ ಗ್ರಾಪಂ ವ್ಯಾಪ್ತಿಯ ಭಾಗದ ಜನರಿಗೆ ಹಾಗೂ ಸಖರಾಯಪಟ್ಟಣ ಭಾಗದ ಹಳ್ಳಿಗಳಿಗೂಅನುಕೂಲವಾಗಲಿದ್ದು, ಮಾದರಸ ಕೆರೆಗೆ ಒಟ್ಟು ರೂ.17 ಕೋಟಿ ಹಾಗೂ ದಾಸರಹಳ್ಳಿ ಕೆರೆಯ ಕಾಮಗಾರಿಗೆ ರೂ.11 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಜಿಪಂ ಉಪಾಧ್ಯಕ್ಷ ಬಿ.ಜೆ. ಸೋಮಶೇಖರಪ್ಪ, ಜಿಪಂ ಸದಸ್ಯ ರವೀಂದ್ರ ಬೆಳವಾಡಿ, ವೀರಭದ್ರಪ್ಪ, ದಿನೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next