Advertisement

ಶೀಘ್ರ ಕಚ್ಚಾ ರಸ್ತೆ ನಿರ್ಮಿಸಿ, ಸೌಕರ್ಯ ಕಲ್ಪಿಸಲು ಕ್ರಮ

12:52 PM Oct 04, 2020 | Suhan S |

ಹನೂರು: ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಅರಣ್ಯದೊಳಗಿನ ಗ್ರಾಮಗಳಿಗೆ ಮುಂದಿನ 30-45 ದಿನಗಳೊಳಗಾಗಿ ಅರಣ್ಯ ಇಲಾಖಾ ವತಿಯಿಂದಕಚ್ಚಾ ರಸ್ತೆ ನಿರ್ಮಿಸಿ ಮೂಲ ಸೌಕರ್ಯಕಲ್ಪಿಸಲುಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ಭರವಸೆ ನೀಡಿದರು.

Advertisement

ತಾಲೂಕಿನ ತುಳಸಿಕೆರೆಯಲ್ಲಿ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳ ಸಂಬಂಧ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ವಿವಿಧ ಇಲಾಖೆ ವತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಚಾಮರಾಜನಗರದಲ್ಲಿ ಸೆ.7ರಂದು ನಡೆದ ರೈತ ಮುಖಂಡರ ಸಭೆಯಲ್ಲಿ ಕೆರೆಗಳ ವೀಕ್ಷಣೆ ಮತ್ತು ಅಭಿವೃದ್ಧಿ,ಕಾಡಂಚಿನ ಗ್ರಾಮಗಳಿಗೆ ಭೇಟಿ ಮತ್ತು  ಜಲಸಂಪನ್ಮೂಲ ಸಚಿವರನ್ನು ಜಿಲ್ಲೆಗೆ ಕರೆತರುವುದು ಸೇರಿದಂತೆ 3 ಪ್ರಮುಖ ಬೇಡಿಕೆಗಳನ್ನು ಇಡಲಾಗಿತ್ತು. ಈ ಪೈಕಿಈಗಾಗಲೇ ಜಿಲ್ಲೆಯ ವಿವಿಧ ಕೆರೆಗಳಪರಿಶೀಲನೆ ನಡೆಸಿ ಅಭಿವೃದ್ಧಿಗಾಗಿ ಕ್ರಮವಹಿಸಲಾಗಿದೆ. ಇದೀಗ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತಿದ್ದು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಇನ್ನು ಬಾಕಿ ಉಳಿದಿ ರುವ ಒಂದು ಬೇಡಿಕೆಯನ್ನು ಮುಂಬರುವ ದಿನಗಳಲ್ಲಿ ಈಡೇರಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಸಕ ನರೇಂದ್ರ, ಜಿಲ್ಲಾಧಿಕಾರಿ ಡಾ| ರವಿ, ಮಲೆ  ಮಹದೇಶ್ವರ ವನ್ಯಜೀವಿ ವಲಯದಡಿಎಫ್ಓ ಏಡುಕುಂಡಲು, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ತಾಪಂ ಇಒ  ರಾಜು, ಶಶಿಧರ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವಯ್ಯ ಇತರರಿದ್ದರು.

ಸಚಿವರ ಭರವಸೆ :  ಗ್ರಾಮಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗುವುದು. ಪಡಿತರ ಪಡೆಯಲು 8-10 ಕಿ.ಮೀ. ಕಾಲ್ನಡಿಗೆಯಲ್ಲಿ ನಡೆಯಬೇಕಾಗಿರುವ ಗ್ರಾಮಗಳಿಗೆ ನಿಗದಿತ ವೇಳಾಪಟ್ಟಿ ತಯಾರು ಮಾಡಿ ಸಂಚಾರಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು. ಅರಣ್ಯದಲ್ಲಿದನಗಳನ್ನು ಮೇಯಿಸಲು ಅನುಮತಿ  ನೀಡುವ ಸಂಬಂಧಅಧಿಕಾರಿಗಳ ಜೊತೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಅರಣ್ಯದಲ್ಲಿ ದನದ ದೊಡ್ಡಿ ಕಲ್ಪಿಸಲಾಗುವುದು.ಕೆಲ ಗ್ರಾಮಗಳಲ್ಲಿ ಅಂಗನವಾಡಿ ತೆರೆಯುವ ನಿಟ್ಟಿನಲ್ಲಿ ಮಕ್ಕಳ ಲಭ್ಯತೆ ಬಗ್ಗೆ ಸರ್ವೆ ನಡೆಸಿ ಅಗತ್ಯವಿರುವ ಕಡೆಗಳಲ್ಲಿ ಅಂಗನವಾಡಿ ತೆರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಮ.ಬೆಟ್ಟ ಸುತ್ತಮುತ್ತಲು ಹೆಚ್ಚಾಗಿರುವಬೇಡಗಂಪಣ ಸಮುದಾಯವನ್ನು ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗುವುದು. ಮ.ಬೆಟ್ಟ ಸುತ್ತಮುತ್ತಲ ದೇಶಿತಳಿ ಗೋವುಗಳ ರಕ್ಷಣೆಗೆ ಮೇವಿನ ಅಗತ್ಯತೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next