ಮೈಸೂರು: ಜ್ಯುಬಿಲಿಯಂಟ್ ನೌಕರನಿಗೆ ಸೋಂಕು ಎಲ್ಲಿಂದ ಬಂತು ಎನ್ನುವುದನ್ನು ಪತ್ತೆಹಚ್ಚಲು ಮೂರ್‍ನಾಲ್ಕು ಮೂಲಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿ, ಯಾವ ರಾಜ್ಯದಲ್ಲೂ ಸೋಂಕು ಹರಡಿರುವ ಮೂಲ ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ. ರೋಗ ಎಲ್ಲಿಂದ, ಯಾರಿಗೆ ಬರುತ್ತದೆ ಎನ್ನುವುದನ್ನು ಪತ್ತೆ ಸಾಧ್ಯವಿಲ್ಲ. ಆದರೆ, ನಂಜನಗೂಡಿನ ಶಾಸಕರು ಸೋಂಕು ಕಾರ್ಖಾನೆ ನೌಕರರನಿಗೆ ಬಂದ ಸೋಕು ತಗುಲಿರುವ ಮೂಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಲ್ಲಿನ ಸಂಸದರೂ ಮೂಲದ ಬಗ್ಗೆ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿ ಹರ್ಷಗುಪ್ತ ಅವರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗೆ ದೆಹಲಿ, ಬೆಂಗಳೂರಿಂದ ಕೆಲವರು ಬಂದು ಹೋಗಿರುವುದು ಸೇರಿದಂತೆ ಮೂರ್‍ನಾಲ್ಕು ಮೂಲಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು. ತನಿಖೆ ಆರಂಭಿಸಿರುವ ಹರ್ಷಗುಪ್ತ ಅವರು ಕೆಲವು ಮಾಹಿತಿ ಕೇಳಿದ್ದಾರೆ. ಪ್ರಕರಣ ಸಂಬಂಧ ಮೈಸೂರು ಡೀಸಿ, ಎಸ್‌ಪಿ, ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಎಲ್ಲಾ ಅಧಿಕಾರಿಗಳು ನೀಡಿದ ಅಭಿಪ್ರಾಯ ಪಡೆದು ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ನಂಜನಗೂಡು, ಮೈಸೂರಿನ ವಿವಿಧ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ನೌಕರರಿಗೆ ಈ ತಿಂಗಳ ಸಂಬಳ ನೀಡಿಲ್ಲ ಎಂದ ದೂರು ಕೇಳಿ ಬಂದಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವೇತನ ಮಂಜೂರು ಮಾಡಿಸುವಂತೆ ಕಾರ್ಮಿಕ ಸಚಿವ ರಿಗೆ ಲಿಖೀತ ರೂಪದಲ್ಲಿ ಮನವಿ ಮಾಡಿಕೊಂಡಿದ್ದೇನೆ.
ಇನ್ನೆರಡು ದಿನದಲ್ಲಿ ಕಾರ್ಮಿಕ ಸಚಿವರು ಮೈಸೂರಿಗೆ ಆಗಮಿಸಿ, ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸ ಲಿದ್ದಾರೆ. ಆ ಮೂಲಕ ಕಾರ್ಮಿಕರಿಗೆ ಅನ್ಯಾಯವಾಗ ದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಏಕಮುಖ ತೀರ್ಮಾನವಿಲ್ಲ: ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಸುವ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ಅಧಿಕಾರಿ ಹಾಗೂ ಜನರ ಅಭಿಪ್ರಾಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.