Advertisement

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

12:24 PM Oct 23, 2021 | Team Udayavani |

ಮಸ್ಕಿ: ಸರಕಾರದ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗುತ್ತಿರುವ ಮಸ್ಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಸರಕಾರದಿಂದ ರೈತರಿಗೆ ವಿತರಣೆ ಮಾಡುವ ಕೃಷಿ ಸಲಕರಣೆಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತಾಡಪಲ್‌ ವಿತರಣೆಯಲ್ಲಿ ಅನ್ಯಾಯ ಮಾಡಲಾಗಿದೆ. ಎಸ್ಸಿ ಜನಾಂಗದ ರೈತರಿಗೆ 450 ರೂ., ಸಾಮಾನ್ಯ ವರ್ಗದ ರೈತರಿಗೆ 750 ರೂ.ಗೆ ನೀಡಬೇಕಾದ ತಾಡಪಲ್‌ನ್ನು 1600 ರೂ.ವರೆಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಾಕ್ಷ್ಯಗಳಿವೆ. ಸರಕಾರದ ಯೋಜನೆಯ ಹೆಸರಲ್ಲಿಯೂ ರೈತರಿಗೆ ಮೋಸ ಮಾಡುತ್ತಿರುವ ಇಂತಹ ಸಿಬ್ಬಂದಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡರಾದ ಸಿ.ಎಚ್‌. ರವಿಕುಮಾರ, ವಿಜಯ ಬಡಿಗೇರ, ಮಲ್ಲನಗೌಡ, ಬಡೇಸಾಬ, ಶ್ಯಾಮರಾಜ ಅಗಸ್ತ್ಯ, ಸೇಟಪ್ಪ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next