Advertisement

ಸಾಲ, ಬಡ್ಡಿ ವಸೂಲಿ ಮಾಡಿದರೆ ಕ್ರಮ

06:52 AM May 25, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌-19 ಕಾರಣದಿಂದ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಮೈಕ್ರೋ  ಫೈನಾನ್ಸ್‌ ಕಂಪನಿ ಗಳು, ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಗ್ರಾಹಕರಿಂದ ಬಲವಂತವಾಗಿ ಸಾಲ, ಬಡ್ಡಿ ವಸೂಲಾತಿ ಮಾಡಿದರೆ  ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿ  ಕಾರಿ ಡಾ. ಎಂ.ಆರ್‌. ರವಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮೈಕ್ರೋಫೈನಾನ್ಸ್‌, ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳ  ಸಭೆಯಲ್ಲಿ ಮಾತನಾಡಿದರು.

Advertisement

ಪ್ರಸ್ತುತ ಲಾಕ್‌ಡೌನ್‌ ಇರುವುದರಿಂದ ಜನರಿಗೆ ಹಲವು ತೊಂದರೆ ಗಳಿವೆ. ಆದಾಯ, ಉದ್ಯೋಗ ಏರುಪೇರಿ ನಿಂದಾಗಿ ಸದ್ಯದಲ್ಲಿ ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ  ಸಾಲ, ಬಡ್ಡಿ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತಿಲ್ಲ. ಜೂನ್‌ 31ರವರೆಗೂ ಯಾವುದೇ ಕಾರಣಕ್ಕೂ ಗ್ರಾಹಕ ರಿಂದ ಸಾಲ ಹಾಗೂ ಬಡ್ಡಿ ಹಣವನ್ನು ಪಡೆಯಬಾರದು ಎಂದು ತಾಕೀತು ಮಾಡಿದರು.

ಗಂಭೀರ ಕ್ರಮ: ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸಾಲ, ಬಡ್ಡಿ ಪಾವತಿಸುವಂತೆ ಒತ್ತಾಯಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಇಂತಹ ಸಮಸ್ಯೆಗಳು ಮತ್ತೆ ಕೇಳಿಬಂದರೆ ಜಿಲ್ಲಾಡಳಿತ ಗಂಭೀರ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ.  ಸ್ವಸಹಾಯ ಸಂಘಗಳು, ಇತರೆ ಹಣಕಾಸು  ಸಂಸ್ಥೆಗಳು ಬ್ಯಾಂಕುಗಳು ಸಾಲ ಮರುಪಾವತಿ ಮಾಡುವಂತೆ ಗ್ರಾಹಕರಿಗೆ ನೋಟಿಸ್‌ ನೀಡ  ಬಾರದು. ಸಾಲ, ಬಡ್ಡಿ ವಸೂಲು ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ  ಮಾಹಿತಿಯನ್ನು ಸಂಸ್ಥೆಗಳೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ತಿಳಿಸಬೇಕು ಎಂದರು.

ವರದಿ ನೀಡಬೇಕು: ಜಿಲ್ಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕುಗಳು, ಮೈಕ್ರೋಫೈನಾನ್ಸ್‌ ಸಂಸ್ಥೆಗಳು ಗ್ರಾಹಕರೊಂದಿಗೆ ಹೇಗೆ ವ್ಯವಹರಿಸುತ್ತಿ ವೆ? ಒತ್ತಾಯಪೂರ್ವಕವಾಗಿ ಸಾಲ ಬಡ್ಡಿ ವಸೂಲಾತಿಗೆ ಮುಂದಾಗಿ ಗ್ರಾಹಕರಿಗೆ ತೊಂದರೆ  ನೀಡುತ್ತಿವೆಯೇ? ಎಂಬ ಬಗ್ಗೆ ಪೂರ್ಣವಾಗಿ ಪರಿಶೀಲಿಸಿ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಲೀಡ್‌ಬ್ಯಾಂಕ್‌ ವ್ಯವಸ್ಥಾಪಕಿ ಸುನಂದಾ, ಸಹಕಾರ ಸಂಘಗಳ ಉಪನಿಬಂಧಕ ವಿಕ್ರಮರಾಜೇ  ಅರಸ್‌, ಸಹಾಯಕ ನಿಬಂಧಕ ರಮೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆಯ ಉಪನಿರ್ದೇಶಕ ಬಸವರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next