ಅಳ್ನಾವರ: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡುವ ಗುರುತರವಾದ ಜವಾಬ್ದಾರಿಯು ಶಿಕ್ಷಕರ ಮೇಲಿದ್ದುಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣಮಾಡುವುದು ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮುಗದ ಗ್ರಾಮದ ಹನಮಂತಪ್ಪ ಮಾವಳೇರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನದಲ್ಲಿಕೌಶಲ್ಯ, ಸೃಜನಶೀಲತೆ ಹಾಗೂ ಅನ್ವಯಗಳು ಎಂಬ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಪಟ್ಟಣದವರೊಂದಿಗೆ ಇಂದಿನ ದಿನಮಾನಕ್ಕೆ ತಕ್ಕಂತೆಪೈಪೋಟಿ ನೀಡಬೇಕಾಗಿದೆ. ಶಾಲೆಗಳಿಗೆ ಅಗತ್ಯಮೂಲಸೌಕರ್ಯಗಳನ್ನು ಒದಗಿಸಿ ಸದೃಢಗೊಳಿಸುವಮೂಲಕ ಮಾದರಿ ಶಾಲೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಬಿ.ಜಿ.ಮೂಲಿಮನಿ ಮಾತನಾಡಿ, ಜ್ಞಾನಕ್ಕೆ ಸಮಾನವಾದುದುಯಾವುದೂ ಇಲ್ಲ. ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನುಬೆಳೆಸಿ ಅಭಿವೃದ್ಧಿಶೀಲ ಭಾರತ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸಮನಿ ಮಾತನಾಡಿ, ಸೃಜನಶೀಲತೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯವಿದ್ದು ಗ್ರಂಥಗಳು ನಮ್ಮ ಬದುಕಿನ ದಾರಿ ದೀಪವಾಗಿವೆ. ಕೌಶಲ್ಯ ಮತ್ತು ಸೃಜನಶೀಲತೆಗೆಪೂರಕವಾದ ಗ್ರಂಥಗಳನ್ನು ಓದುವ ಹವ್ಯಾಸರೂಢಿಸಿಕೊಳ್ಳಬೇಕು. ಇಲಾಖೆಯು ಈಗಡಿಜಿಟಲೀಕರಣ ವ್ಯವಸ್ಥೆಗೆ ಬದಲಾವಣೆಯಾಗಿದ್ದು,ಅಂಗೈಯಲ್ಲಿಯೇ ಪುಸ್ತಕಗಳನ್ನು ಓದಬಹುದಾಗಿದೆ ಎಂದರು.
ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯದ ಗ್ರಂಥಾಲಯ ಇಲಾಖೆಯು ಮುಂದಿದ್ದು, 15 ಲಕ್ಷ ಇ-ಪುಸ್ತಕಗಳು ಲಭ್ಯವಿವೆ. ಈಗಾಗಲೇ 65 ಲಕ್ಷ ಜನರು ಸದಸ್ಯತ್ವಪಡೆದುಕೊಂಡು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಮುಖ್ಯಸ್ಥ ವೀರಣ್ಣ ಬೊಳಿಶೆಟ್ಟಿ ತರಬೇತಿಯ ಮಾಹಿತಿನೀಡಿದರು. ಮುಖ್ಯಾಧ್ಯಾಪಕಿ ಕಮಲಾ ನಾಯಕಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಡಿಡಿಪಿಐ ಮೋಹನಕುಮಾರಹಂಚಾಟೆ, ಬಿಇಒ ಉಮೇಶ ಬೊಮ್ಮಕ್ಕನವರ, ಉದ್ಯಮಿ ಮನೋಹರ ಮೋರೆ, ಜಯಕುಮಾರಅಳಗುಂಡಿ ಇದ್ದರು. ಡಿ.ಎಸ್. ಕೆಂಗಣ್ಣವರ ಸ್ವಾಗತಿಸಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು