Advertisement

ತೋಳ್ಬಲ ನಿಗಾಕ್ಕೆ ಸಮಿತಿ; ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಕೇಂದ್ರ ಚುನಾವಣೆ ಆಯೋಗದ ಕ್ರಮ

12:18 AM Jan 18, 2022 | Team Udayavani |

ಹೊಸದಿಲ್ಲಿ/ಲಕ್ನೋ: ಉತ್ತರ ಪ್ರದೇಶ ಸೇರಿ, ಐದು ರಾಜ್ಯಗಳ ಚುನಾವಣೆ ವೇಳೆ ಹಣಬಲ ಹಾಗೂ ತೋಳ್ಬಲ ಪ್ರದರ್ಶನ ಮೇಲೆ ನಿಗಾ ಇರಿಸಲು ಕೇಂದ್ರ ಚುನಾವಣಾ ಆಯೋಗ ವಿಶೇಷ ಸಮಿತಿ ರಚಿಸಿದೆ.

Advertisement

ಇದರ ಜತೆಗೆ “ನಿಮ್ಮ ಅಭ್ಯರ್ಥಿ ಯನ್ನು ಅರಿಯಿರಿ’ ((Know your candidate)) ಎಂಬ ಮೊಬೈಲ್‌ ಆ್ಯಪ್‌ ಅನ್ನೂ ರಚಿಸಿದೆ. ಐದೂ ರಾಜ್ಯಗಳ ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಮೇಲೆ ದಾಖಲಾ ಗಿರುವ ಅಪರಾಧ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದೂ ಸೂಚಿಸಲಾಗಿದೆ. 2021ರ ಆ. 10 ರಂದು ಸುಪ್ರೀಂ ಕೋರ್ಟ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯ ರ್ಥಿಗಳು ತಮ್ಮ ವಿರುದ್ಧ ಇರುವ ಮೊಕದ್ದಮೆ ಮತ್ತು ಇತರ ಅಪರಾಧಿಕ ಹಿನ್ನೆಲೆಯ ಬಗ್ಗೆ ಮಾಧ್ಯ ಮಗಳಲ್ಲಿ ಪ್ರಕಟಿಸಬೇಕು ಎಂದು ತೀರ್ಪು ನೀಡಿದ್ದ ಹಿನ್ನೆಲೆ ಚುನಾವಣ ಆಯೋಗ ಈ ಕ್ರಮ ಕೈಗೊಂಡಿದೆ. ಅಂಥ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ ರಾಜಕೀಯ ಪಕ್ಷಗಳಿಗೂ ಈ ನಿಯಮ ಅನ್ವಯ ವಾಗಲಿದೆ.

ಅರಿವು ಮೂಡಿಸಲು ಕ್ರಮ: “ನೋ ಯುವರ್‌ ಕ್ಯಾಂಡಿಡೇಟ್‌’ ಎಂಬ ಹೊಸ ಮೊಬೈಲ್‌ ಆ್ಯಪ್‌ ಅನ್ನು ಆಯೋಗ ಬಿಡುಗಡೆ ಮಾಡಿದೆ. ಅದರಲ್ಲಿ ಅಭ್ಯರ್ಥಿಗಳ ಅಪರಾಧದ ಪ್ರಕರಣಗಳ ವಿವರವಿದೆ. ಮತದಾ ರರಿಗೆ ಅರಿವ, ತರಬೇತಿ ನೀಡುವ ನಿಟ್ಟಿನಲ್ಲಿ ಚುನಾವಣಾ ನಿರ್ವಹಣ ಅನುದಾನದಲ್ಲೇ ಒಂದಿಷ್ಟು ಹಣವನ್ನು ಆಯೋಗ ಮೀಸಲಿಡಲಿದೆ.

ಸಮಯದ ಮಿತಿ: ಅಭ್ಯರ್ಥಿಗಳು ಮನವಿ ಮಾಡಿ ಕೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮ ಪತ್ರ ವಾಪಸ್‌ ಪಡೆಯುವ ನಾಲ್ಕು ದಿನಗಳ ಮೊದಲು ಪತ್ರಿಕೆಗಳಲ್ಲಿ ಅಪರಾಧ ಹಿನ್ನೆಲೆ ಬಗ್ಗೆ ಜಾಹೀರಾತು ನೀಡಲು ಆಯೋಗ ಅನುವು ಮಾಡಿಕೊಟ್ಟಿದೆ.

ಅಭ್ಯರ್ಥಿ ಸೆಳೆಯಲು ಯತ್ನ: ಗೋರಖ್‌ಪುರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಚುನಾವಣೆ ಯಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಆ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಧಾಮೋಹನ್‌ ಅಗರ್ವಾಲ್‌ ಅವ ರನ್ನು ಸಮಾಜವಾದಿ ಪಕ್ಷಕ್ಕೆ ಸೆಳೆಯಲು ಅಖೀಲೇಶ್‌ ಯಾದವ್‌ ಮುಂದಾಗಿದ್ದಾರೆ. 2002ರಿಂದ ಅವರು ಗೋರಖ್‌ಪುರ ನಗರ ಕ್ಷೇತ್ರದ ಶಾಸಕರಾಗಿದ್ದಾರೆ.

Advertisement

ಬಿಜೆಪಿ ಶಾಸಕನ ವಿರುದ್ಧ ಕೇಸು: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿ ಸಿದಂತೆ ಉ.ಪ್ರದೇಶದ ಮುಝಾಫ‌ರ್‌ನಗರದಲ್ಲಿ ಬಿಜೆಪಿ ಶಾಸಕ ಉಮೇಶ್‌ ಮಲಿಕ್‌ ಸೇರಿ ಇನ್ನೂ ಇಬ್ಬರು ಅಭ್ಯರ್ಥಿಗಳ ಹಾಗೂ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲಾಗಿದೆ. ಬಹಿರಂಗ ರ್‍ಯಾಲಿ ನಡೆಸಿ ದ್ದರಿಂದ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಪ್ರಮುಖರು ಇಲ್ಲದ ಉ.ಪ್ರ. ಎಲೆಕ್ಷನ್‌
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ನಾಯಕರ ಅನುಪಸ್ಥಿತಿ ಗಾಢವಾಗಿ ವಿವಿಧ ಪಕ್ಷಗಳಿಗೆ ಕಾಡುತ್ತಿದೆ. ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್‌ ಸಿಂಗ್‌, ಲಾಲ್‌ಜಿ ಟಂಡಂನ್‌, ರಾಷ್ಟ್ರೀಯ ಲೋಕದಳದ ಅಜಿತ್‌ ಸಿಂಗ್‌, ಸಮಾಜವಾದಿ ಪಕ್ಷದ ಮುಖಂಡ ಅಮರ್‌ ಸಿಂಗ್‌, ಬೇಣಿ ಪ್ರಸಾದ್‌ ವರ್ಮಾ ಅವರು ನಿಧನರಾಗಿದ್ದಾರೆ. ಅವರೆಲ್ಲ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಕಾಲವಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ಪ್ರಚಾರದಿಂದ ದೂರ ಉಳಿದಿದ್ದಾರೆ. ಇದೇ ವೇಳೆ, ಉತ್ತರಾಖಂಡದ ಪ್ರಮುಖ ಮಹಿಳಾ ನಾಯಕಿ ಸರಿತಾ ಆರ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ ಚುನಾವಣೆ ಫೆ.20ಕ್ಕೆ ಮುಂದೂಡಿಕೆ
ಪಂಜಾಬ್‌ನಲ್ಲಿ ಫೆ.14ರಂದು ನಡೆಯಬೇಕಾಗಿರುವ ವಿಧಾನಸಭೆ ಚುನಾವಣೆ ಯನ್ನು ಫೆ.20ಕ್ಕೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಆ ದಿನ ಗುರು ರವಿದಾಸ ಜಯಂತಿ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ, ಪಂಜಾಬ್‌ ಬಿಜೆಪಿ ಘಟಕದ ನಾಯಕರು ಸಹಿತ ಪ್ರಮುಖ ಮುಖಂಡರು ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದರು. ಹೀಗಾಗಿ, ಸೋಮವಾರ ಹೊಸದಿಲ್ಲಿಯಲ್ಲಿ ಸಭೆ ಸೇರಿದ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಬೇಡಿಕೆಯನ್ನು ಪರಿಶೀಲಿಸಿ, ದಿನಾಂಕ ಬದಲಾವಣೆಗೆ ಒಪ್ಪಿಗೆ ನೀಡಿದೆ. ಗುರು ರವಿದಾಸರ ಜಯಂತಿ ಪ್ರಯುಕ್ತ ಸಾವಿರಾರು ಮಂದಿ ಅವರ ಭಕ್ತರು ವಾರಾಣಸಿಗೆ ತೆರಳಲಿದ್ದಾರೆ. ಹೀಗಾಗಿ, ದಿನ ಬದಲಿಗೆ ಆಗ್ರಹ ವ್ಯಕ್ತವಾಗಿತ್ತು. ಫೆ. 20ರಂದು ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. 2013 ಮತ್ತು 2014ರಲ್ಲಿ ಮಿಜೋರಾಂನಲ್ಲಿ ನಡೆಯಬೇಕಾಗಿದ್ದ ಚುನಾವಣೆಯ ದಿನಾಂಕವನ್ನೂ ಬದಲಾವಣೆ ಮಾಡಲಾಗಿತ್ತು. ಪಂಜಾಬ್‌ನ ಪ್ರಮುಖ ರಾಜಕೀಯ ಪಕ್ಷಗಳು ಆಯೋಗದ ನಿರ್ಧಾರ ಸ್ವಾಗತಿಸಿವೆ.

ಇಂದು ಘೋಷಣೆ: ಆಮ್‌ ಆದ್ಮಿ ಪಕ್ಷ ಪಂಜಾಬ್‌ಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮಂಗಳವಾರ ಪ್ರಕಟಿಸಲಿದೆ. ಎಸ್‌ಎಂಎಸ್‌ ಮೂಲಕ 15 ಲಕ್ಷ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೊಸದಿಲ್ಲಿಯಲ್ಲಿ ಹೇಳಿದ್ದಾರೆ.

ಚುನಾವಣ ತುಣುಕು
-ಪಂಜಾಬ್‌ನ ಸಚಿವ ರಾಣಾಗುರ್ಜೀತ್‌ ಸಿಂಗ್‌ ಪುತ್ರ ಸುಲ್ತಾನ್‌ಪುರ ಲೋಧಿಯಿಂದ ಸ್ವತಂತ್ರ ಸ್ಪರ್ಧೆ
-ಟಿಕೆಟ್‌ ವಂಚಿತ ಸಹೋದರ ಮನೋಹರ್‌ ಸಿಂಗ್‌ ಮನವೊಲಿಕೆಗೆ ಪಂಜಾಬ್‌ ಸಿಎಂ ಚನ್ನಿ ನಿರ್ಧಾರ.
-ಗೋವಾದಲ್ಲಿ ಸ್ಥಾನ ಹೊಂದಾಣಿಕೆ: ಇಂದು ಶಿವಸೇನೆ-ಎನ್‌ಸಿಪಿ ಮಾತುಕತೆ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next