Advertisement

ನಕಲಿ ಬೀಜ-ಗೊಬ್ಬರ ಮಾರಿದರೆ ಕಠಿಣ ಕ್ರಮ

05:44 PM Apr 30, 2020 | Suhan S |

ರೋಣ: ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ನಿಯಮವಳಿಗೆ ಅನುಸಾರವಾಗಿ ರೈತರಿಗೆ ಬೀಜ, ಗೊಬ್ಬರ, ಕ್ರಿಮಿನಾಶಕಗಳನ್ನು ಮಾರಾಟ ಮಾಡಬೇಕು ಎಂದು ಗದಗ ಜಂಟಿ ಕೃಷಿ ಕಾರ್ಯಾಲಯದ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ಹೇಳಿದರು.

Advertisement

ಅವರು ಪಟ್ಟಣದ ವಿವಿಧ ಬೀಜ, ಗೊಬ್ಬರ, ಕ್ರಿಮಿನಾಶಕ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದರು. ಕೋವಿಡ್ 19  ವೈರಸ್‌ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲಾಖೆಯ ನಿಮಯಗಳಂತೆ ಸಾಮಾಜಿಕ ಅಂತರದೊಂದಿಗೆ ರೈತರಿಗೆ ಬೀಜ ಗೊಬ್ಬರವನ್ನು ಮಾರಾಟ ಮಾಡಬೇಕು. 2020-21 ಮುಂಗಾರಿ ಹಂಗಾಮಿನಲ್ಲಿ ರೈತರಿಗೆ ಇಲಾಖೆಯಿಂದ ಪ್ರಮಾಣೀಕರಿಸಿದ ಬೀಜ ಹಾಗೂ ಗೊಬ್ಬರ ಮಾರಾಟ ಮಾಡಬೇಕು. ಅಲ್ಲದೇ ಇಲಾಖೆ ನಿಮಯ ಹಾಗೂ ದರವನ್ನು ಬಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ಆದ್ದರಿಂದ ಯಾವುದೇ ರೈತರಿಗೆ ಮೋಸವಾಗದಂತೆ ಮಾರಾಟ ಮಾಡಬೇಕು. ಪ್ರತಿದಿನವೂ ದರದ ಪಟ್ಟಿಯನ್ನು ಕಡ್ಡಾಯವಾಗಿ ಅಂಗಡಿಯಲ್ಲಿ ಹಾಕಬೇಕು. ಅಲ್ಲದೇ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಬೀಜ ಗೊಬ್ಬರವನ್ನು ಪೂರೈಸಲಾಗುತ್ತದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿಂದ್ರಗೌಡ ಪಾಟೀಲ ಮಾತನಾಡಿ, ಅಕ್ರಮವಾಗಿ ಬೀಜಗಳನ್ನು ದಾಸ್ತಾನು ಮಾಡುವುದಾಗಲಿ, ನಕಲಿ ಬೀಜಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next