Advertisement

ಕಳಪೆ ಬೇಳೆ ಪೂರೈಸಿದರೆ ಕಠಿಣ ಕ್ರಮ: ಗೋಪಾಲಯ್ಯ

07:01 AM Jun 30, 2020 | Lakshmi GovindaRaj |

ಹಾಸನ: ಅಕ್ಷರ ದಾಸೋಹದ ಯೋಜನೆಯಡಿ ಮಕ್ಕಳಿಗೆ ಕಳಪೆ ತೊಗರಿಬೇಳೆ ಪೂರೈಸಿದರೆ ಕಠಿಣ ಕ್ರಮ ಕೈಗೊಳ್ಳುವು ದಾಗಿ ಆಹಾರ ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು. ಕಳಪೆ  ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಹಾಗೂ ಹಾಸನದಲ್ಲಿ ಆಹಾರ ನಿಗಮದ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮಕ್ಕಳಿಗೆ ನೀಡುವ ಬೇಳೆ ಕಳಪೆ  ಗುಣಮಟ್ಟದ್ದಾಗಿದೆ ಎನ್ನುವ ಆರೋಪದ ಮೇಲೆ ಖುದ್ದಾಗಿ ಎಲ್ಲ ತಾಲೂಕಿಗೆ ಭೇಟಿ ನೀಡಿ ಸರಬ ರಾಜಾಗಿರುವ ಬೇಳೆಯನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದೇನೆ. ಬೇಳೆ ಕಳಪೆ ಗುಣ ಮಟ್ಟದ್ದಾಗಿವೆ ಎಂದು ಸಾಬೀತಾದಲ್ಲಿ ಅಂತಹವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ,

ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಪಂ ಸಿಇಒ ಬಿ.ಎ. ಪರಮೇಶ್‌ ಹಾಗೂ  ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾಅವರೊಂದಿಗೆ ಗೋದಾಮುಗಳಿಗೆ ಭೇಟಿ ನೀಡಿದ ಸಚಿವರು ದಾಸ್ತಾನು ಇದ್ದ ಬೇಳೆ ಕಾಳುಗಳನ್ನು ಪರಿಶೀಲಿಸಿದರು. ಇತರೆ ಜಿಲ್ಲೆಗಳಲ್ಲಿನ ಬೇಳೆಕಾಳುಗಳ ಮಾದರಿ ತರಿಸಿ ತಪಾಸಣೆಗೆ ಒಳಪಡಿಸಿ   ಗುಣಮಟ್ಟದಲ್ಲಿ ಕಳಪೆಯಾದರೆ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಬಾಂಬೆ ಡೇಸ್‌ ಪುಸ್ತಕ ಬರೆಯಲಿ ಓದುವೆ: ಎಚ್‌. ವಿಶ್ವನಾಥ್‌ ಅವರಿಗೆ ಸ್ಥಾನಮಾನ ವಿಚಾರವಾಗಿ ಬಿಜೆಪಿ  ಹೈಕಮಾಂಡ್‌ ಹಾಗೂ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿ¨ªಾರೆ ಎಂದು ಸಚಿವ ಗೋಪಾಲಯ್ಯ ಹೇಳಿದರು. ವಿಶ್ವನಾಥ್‌ ಅವರು ಬಾಂಬೆ ಡೇಸ್‌ ಎಂಬ ಕೃತಿ ರಚಿಸುವುದಾಗಿ ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಷಯವಾಗಿದೆ.  ಕೃತಿಯನ್ನು ನಾನು ಓದುತ್ತೇನೆ. ಆದರೆ ಈ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವು ದಿಲ್ಲ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next