ಇಂಡಿ: ಸಿಂದಗಿ, ಇಂಡಿ, ಚಡಚಣ ತಾಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೃಷ್ಣಾ ಕಾಲುವೆಯಿಂದ ಸಂಗೋಗಿ ಕೆರೆಗೆ ಬುಧವಾರ ಸಂಜೆ ನೀರು ಬಂದಿದೆ. ಕೆರೆಗಳಿಗೆ ಮೋಟಾರ್ ಅಳವಡಿಸಿ ಕೃಷಿಗೆ ನೀರು ಬಳಕೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದರು.
ತಾಲೂಕಿನ ಸಂಗೋಗಿ ಕೆರೆಗೆ ಭೇಟಿ ನೀಡಿ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಕೆರೆ ತುಂಬಿದ ನಂತರ ಮತ್ತೆ ಹಂಜಗಿ, ಲೋಣಿ ಕೆರೆ ತುಂಬಲಾಗುವುದು. ಸಂಗೋಗಿ ಕೆರೆಯಿಂದ ಇಂಡಿ ತಾಲೂಕಿನ 30 ಹಳ್ಳಿಗಳು ಮತ್ತು ವಿಜಯಪುರ ತಾಲೂಕಿನ ನಾಗಠಾಣ ಭಾಗದ 54 ಹಳ್ಳಿಗಳಿಗೆ ಕುಡಿಯುವ ನೀರಿನ ಪ್ರಯೋಜನವಾಗಲಿದೆ. ಮುಂದಿನ ತಿಂಗಳು ಜೂ. 12ರ ವರೆಗೆ ಕುಡಿಯುವ ನೀರಿನ ತೊಂದರೆ ಆಗುವುದಿಲ್ಲ ಎಂದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ, ಇಒ ಸುನೀಲ ಮದ್ದಿನ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ, ಪಿಎಸ್‌ಐ ಅಶೋಕ, ಬಸವರಾಜ ರಾವೂರ ಮತ್ತಿತರರಿದ್ದರು.