Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ

12:40 PM May 03, 2019 | pallavi |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೊರಗಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ವಿವಿಧ ಇಲಾಖೆಗಳಡಿಯಲ್ಲಿರುವ ನಂದಿಗಿರಿ ಧಾಮವನ್ನು ಒಂದೇ ಸೂರಿನಡಿ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಗುರು ವಾರ ಮಧ್ಯಾಹ್ನ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಾಧ್ಯಮ ಸಂವಾದದಲ್ಲಿ ಪತ್ರಕರ್ತರ ಸಲಹೆಗಳನ್ನು ಸ್ವೀಕರಿಸಿ ಮಾತ ನಾಡಿದ ಅವರು, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ಬೆಂಗಳೂರಿನಿಂದ ನೇರ ಬಸ್‌ ಸೌಕರ್ಯ ಕಲ್ಪಿಸುವ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ ಎಂದರು.

ಜಿಲ್ಲೆಯಲ್ಲಿ ವಿಶ್ವ ವಿಖ್ಯಾತ ನಂದಿಗಿರಿ ಧಾಮ, ಸ್ಕಂದಗಿರಿ, ಬ್ರಹ್ಮಗಿರಿ, ಅವುಲುಬೆಟ್ಟ, ರಂಗಸ್ಥಳ, ನಂದಿಯ ಬೋಗನಂದೀಶ್ವರ ದೇಗುಲ, ಗಡಿದಂ ವೆಂಕಟರವಣಸ್ವಾಮಿ, ಗುಮ್ಮನಾಯಕನಪಾಳ್ಯ, ತಲಕಾಯಲಬೆಟ್ಟ, ಚಿಂತಾಮಣಿಯ ಕೈವಾರ, ಕೈಲಾಸಗಿರಿ, ಮುರಗಮಲ್ಲ ದರ್ಗಾ ಸೇರಿದಂತೆ ಹಲವು ಐತಿಹಾಸಿಕ ಪ್ರವಾಸಿ ತಾಣಗಳಿವೆ.

ಈ ಸ್ಥಳಗಳಿಗೆ ಹೊರಗಿನ ಪ್ರವಾಸಿಗರನ್ನು ಆಕರ್ಷಿಸುವ ದಿಸೆಯಲ್ಲಿ ಅಗತ್ಯ ಕುಡಿಯುವ ನೀರು, ಶೌಚಾಲಯ, ವಸತಿ ಗೃಹ, ಹೋಟೆಲ್, ಭದ್ರತಾ ಸಿಬ್ಬಂದಿ, ಮಾರ್ಗ ದರ್ಶಕರು, ಆನ್‌ಲೈನ್‌ ಬುಕ್ಕಿಂಗ್‌ ಸೇರಿದಂತೆ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದರು.

ಇಲಾಖೆಗಳಿಗೆ ಪತ್ರ: ಮುಖ್ಯವಾಗಿ ನಂದಿಗಿರಿಧಾಮ ಅರಣ್ಯ ಇಲಾಖೆ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಯಡಿ ಸೇರಿ ಮೂರು ಇಲಾಖೆ ಗಳಡಿ ಯಲ್ಲಿದ್ದು ಅದನ್ನು ಒಂದೇ ಸೂರಿನಡಿ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗುವುದು ಎಂದರು. ಪರಿಸರ ದೃಷ್ಟಿಯಿಂದ ನಂದಿಗಿರಿಧಾಮವನ್ನು ಪರಿಸರ ಸ್ನೇಹಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಜಿಲ್ಲಾಡಳಿತಕ್ಕೆ ಇದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ವಿಡಿಯೋ ಚಿತ್ರೀಕರಣ ಮಾಡಿ ಜಿಲ್ಲಾಡಳಿತದ ಪ್ರಮುಖ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡುವ ಚಿಂತನೆ ಇದೆ. ಜಿಲ್ಲೆಗೆ ಕೊರತೆ ಇರುವ ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿ ನೇಮಕಕ್ಕೂ ಜಿಲ್ಲಾಡಳಿತ ಗಮನ ಕೊಟ್ಟಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಲಹೆ
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕೊರತೆ ಇರುವ ಗೈಡ್‌ಗಳನ್ನು ನೇಮಕ ಮಾಡ ಬೇಕು, ಸ್ಕಂದಗಿರಿ, ಬ್ರಹ್ಮಗಿರಿ ಮತ್ತಿತರ ಚಾರಣಕ್ಕೆ ಅವಕಾಶ ಇರುವ ಸ್ಥಳಗಳಲ್ಲಿ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು. ಜಿಲ್ಲೆಯಲ್ಲಿ ಪತ್ತೆಯಾಗಿರುವ ಶಾಸನಗಳ ಬಗ್ಗೆ ಅನುವಾದ ಮಾಡಿ ಶಿಷ್ಟ ಭಾಷೆಗೆ ಅವುಗಳನ್ನು ಭಾಷಾಂತರ ಗೊಳಿಸಬೇಕು.
Advertisement

ಜಿಲ್ಲೆಯ ಗುಡಿಬಂಡೆ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಬೇಕು. ನಂದಿಬೆಟ್ಟದಲ್ಲಿ ಪ್ರವಾಸಿಗರ ಸೂಕ್ತ ಹಾಗೂ ಗುಣಮಟ್ಟದ ಫ‌ುಡ್‌ಕೋರ್ಟ್‌ ಸ್ಥಾಪಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಕೋತಿಗಳ ಕಾಟ ತಪ್ಪಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರತ್ಯೇಕವಾಗಿ ಜಾಲತಾಣ ರೂಪಿಸಬೇಕು.

ಪ್ರವಾಸಿ ತಾಣಗಳ ಛಾಯಾಚಿತ್ರಗಳ ನ್ನೊಳಗೊಂಡ ಕರಪತ್ರಗಳನ್ನು ವರ್ಣ ರಂಜಿತವಾಗಿ ಮುದ್ರಿಸಿ ಪ್ರಚಾರ ಮಾಡ ಬೇಕು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಟೂರಿಸಂ ಶಿಬಿರಗಳನ್ನು ಆಯೋಜಿಸಿ ರಿಯಾಯಿತಿ ಕೊಡಬೇಕು. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಒತ್ತು ಕೊಡಬೇಕೆಂಬ ಸಲಹೆಗಳು ಪತ್ರಕರ್ತರಿಂದ ಕೇಳಿ ಬಂದವು.

Advertisement

Udayavani is now on Telegram. Click here to join our channel and stay updated with the latest news.

Next