Advertisement

ಕೊಪ್ಪ ಹೋಬಳಿ ಕೇಂದ್ರಕ್ಕೆ ಕ್ರಮ

05:57 AM Jun 15, 2020 | Lakshmi GovindaRaj |

ಪಿರಿಯಾಪಟ್ಟಣ: ಸ್ಥಳೀಯ ಜನಪ್ರತಿನಿಧಿಗಳು ಸ್ವಾರ್ಥ ಬಿಟ್ಟು ಜನತೆಗೆ ಮೂಲ ಸೌಲಭ್ಯ ಕಲ್ಪಿಸಿದರೆ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಶಾಸಕ ಕೆ.ಮಹದೇವ್‌ ಹೇಳಿದರು. ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಾಣಿಜ್ಯ ಮಳಿಗೆ  ಹಾಗೂ ಮುತ್ತಿನ ಮುಳುಸೋಗೆ ಗ್ರಾಮದಲ್ಲಿ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ಸರ್ಕಾರಿ ಕೆಲಸಗಳಿಗಾಗಿ ಹಾರನಹಳ್ಳಿ ಹೋಬಳಿ ಕೇಂದ್ರಕ್ಕೆ ತೆರಳಲು ಅನನುಕೂಲ ಆಗುತ್ತಿರುವ ಬಗ್ಗೆ ಹಲವು  ವರ್ಷಗಳಿಂದ ಈ ಭಾಗದ ಸಾರ್ವಜನಿಕರು ಕೊಪ್ಪ ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲೂಕಿನಲ್ಲಿ ಗ್ರಾಮ ಠಾಣಾ,  ಸ್ಮಶಾನ, ಕೆರೆಗಳ ಒತ್ತುವರಿ ಬಗ್ಗೆ ದೂರುಬಂದಿದ್ದು, ಸರ್ಕಾರಿ ಜಾಗದಒತ್ತುವರಿ ಯನ್ನು ಪೊಲೀಸರ ಸಹಕಾರದಲ್ಲಿ ತೆರವುಗೊಳಿ ಸುವಂತೆ ಸೂಚಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಕೊಪ್ಪ ಗ್ರಾಮದಲ್ಲಿ ಪಿಯು ಕಾಲೇಜು ತೆರೆಯಲು  ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು. ಜಿಪಂ ಸದಸ್ಯ ರಾಜೇಂದ್ರ ಮಾತನಾಡಿ, ಕೊರೊನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡವರಿಗೆ ನರೇಗಾ ಯೋಜನೆ ಮೂಲಕ ಉದ್ಯೋಗ ನೀಡಬೇಕು ಎಂದು ಹೇಳಿದರು.

ತಾಪಂ  ಸದಸ್ಯ  ಮುತ್ತ, ಮಾಜಿ ಸದಸ್ಯ ಸೋಮಶೇಖರ್‌,  ಗ್ರಾಪಂ ಅಧ್ಯಕ್ಷೆ ಶಾಹೀನಾ ಬಾನು, ಉಪಾಧ್ಯಕ್ಷ ಯಶವಂತ್‌ ಕುಮಾರ್‌, ಉಪ ತಹಶೀಲ್ದಾರ್‌ ನಿಜಾಮುದ್ದೀನ್‌, ಮುಖಂಡರಾ ದ ರಾಮೇಗೌಡ, ಚಂದ್ರ ಶೇಖರ್‌, ಆರ್‌ಐ ಪ್ರದೀಪ್‌, ನಿರ್ಮಿತಿ  ಕೇಂದ್ರದ ಎಇಇ ರಕ್ಷಿತ್‌ ಕುಮಾರ್‌, ಗ್ರಾಪಂ ಸದಸ್ಯರಾದ ಶಿವ ಪ್ರಕಾಶ್‌, ಮಂಜುಳಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next