Advertisement

ಹೈಟೆಕ್‌ ಮಾರುಕಟ್ಟೆಗೆ ಕ್ರಮ: ಶಾಸಕ

05:36 PM Apr 30, 2020 | Team Udayavani |

ಮಾಗಡಿ: ಕನಕಪುರದ ಮಾರುಕಟ್ಟೆ ಮಾದರಿಯಲ್ಲಿ ಮಾಗಡಿಯಲ್ಲೂ ಸುಂದರ ಹಾಗೂ ಸುಸಜ್ಜಿತ ಹೈಟೆಕ್‌ ಮಾರುಕಟ್ಟೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸದಸ್ಯರ, ಎಪಿಎಂಸಿ ಅಧ್ಯಕ್ಷ ಹಾಗೂ ನಿರ್ದೇಶಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿರಾ ಕ್ಯಾಂಟೀನ್‌ ಹಿಂದಿನ ಹೈಟೆಕ್‌ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿದೆ. ಅದಕ್ಕಾಗಿ ಸುಮಾರು 2.75 ಕೋಟಿ ಮೀಸಲಿಟ್ಟಿದ್ದೇವೆ. ಹೈಟೆಕ್‌ ಸುಮಾರು 9 ಕೋಟಿ ರೂ. ಅಂದಾಜಿಸ ಲಾಗಿದೆ. ಅದಕ್ಕಾಗಿ ಸಂಸದ, ಎಂಎಲ್‌ಸಿ, ಶಾಸಕರ ಅನುದಾನ ಕ್ರೋಢಿಕರಿಸಲು ಚಿಂತಿಸ ಲಾಗಿದೆ ಎಂದರು.

Advertisement

ಲಾಕ್‌ಡೌನ್‌ ಮುಗಿದ ನಂತರ ಪುರಸಭೆ ಅಂಗಡಿ ಮಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಮಹೇಶ್‌ ತಿಳಿಸಿದರು. ಪುರಸಭೆ ಸದಸ್ಯ ರಂಗಹನುಮಯ್ಯ ಮಾತನಾಡಿದರು. ಜಿಲ್ಲಾ ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಪಿಎಸೈ ವೆಂಕಟೇಶ್‌, ಪುರಸಭೆ ಸದಸ್ಯ ಕೆ.ವಿ.ಬಾಲರಘು, ಎಂ.ಎನ್‌.ಮಂಜುನಾಥ್‌, ಕಾಂತರಾಜು, ರಿಯಾಜ್‌, ಅನಿಲ್‌ಕುಮಾರ್‌, ರಘು, ಶಿವಕುಮಾರ್‌, ಅಶ್ವಥ್‌, ನಾಗರತ್ನಮ್ಮ, ರಮೇಶ್‌, ರೇಖಾ, ಜಯಕುಮಾರ್‌, ಎಪಿಎಂಸಿ ನಿರ್ದೇಶಕ ಮಾರೇಗೌಡ, ಕೆ.ಟಿ.ಮಂಜುನಾಥ್‌, ರೂಪೇಶ್‌, ನಾಗರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next