Advertisement

ಕೊಡಗಿನಲ್ಲಿ ಉದ್ಯೋಗ ಸೃಷ್ಟಿಗೆ ಕ್ರಿಯಾಯೋಜನೆ​​​​​​​

06:00 AM Aug 26, 2018 | Team Udayavani |

ಮಡಿಕೇರಿ: ಮಳೆ ಹಾನಿ ಮತ್ತು ಗುಡ್ಡ ಕುಸಿತ, ಹೊಲ-ಗದ್ದೆಗಳ ನಾಶದಿಂದ ಉದ್ಯೋಗ ಕಳೆದುಕೊಂಡಿರುವ ಕುಟುಂಬ
ಗಳಿಗೆ ಶೀಘ್ರ ಉದ್ಯೋಗಾವಕಾಶ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಜಂಟಿಯಾಗಿ ಕ್ರಿಯಾ ಯೋಜನೆ
ಸಿದ್ಧಪಡಿಸಿದೆ.

Advertisement

ಮಕ್ಕಂದೂರು, ಹಟ್ಟಿಹೊಳೆ, ಜೋಡುಪಾಲ, ಹಾಲೇರಿ, ಹೆಬ್ಬೇಟುಗೇರಿ, ಉದಯ ಗಿರಿ, ಮಾದಾಪುರ, ಸುರ್ಲಬಿ, ತಂತಿಪಾಲ,ರಾಟಿ ಮನೆ ಕಾಲೋನಿ, ಮುಕ್ಕೊಡ್ಲು, ಕಾಟಗೇರಿ ಸೇರಿ ಜಿಲ್ಲೆಯ ಅನೇಕ ಪ್ರದೇಶದಲ್ಲಿ ಮಳೆ ಹಾನಿಗೆ ಮನೆ, ಜಮೀನು ಸರ್ವ ನಾಶವಾಗಿದೆ. 51 ನಿರಾಶ್ರಿತರ ಶಿಬಿರದಲ್ಲಿ 6,692 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಬಹುಪಾಲು ನಿರಾಶ್ರಿತರು ಕೂಲಿ ಕೆಲಸ ಮಾಡುವವರಾಗಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಗುಡ್ಡ ಕುಸಿತದಿಂದ ಸಾವಿರಾರು ಎಕರೆ ಪ್ರದೇಶಕ್ಕೆ ಹಾನಿಯಾಗಿರುವುದರಿಂದ ಕಾಫಿ ಎಸ್ಟೇಟ್‌ ಸೇರಿ ವಿವಿಧ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು ಈಗ ನಿರುದ್ಯೋಗಿಗಳಾಗಿ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕುಟುಂಬಕ್ಕೆ ಕುಟುಂಬವೇ ಕೆಲಸವಿಲ್ಲದೇ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಯಾರಿಗೂ ಉದ್ಯೋಗ ಇಲ್ಲದಂತೆ ಮಾಡುವುದಿಲ್ಲ. ನಿರಾಶ್ರಿತರ ಕೇಂದ್ರದಿಂದ ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರಿಸಿದ ನಂತರ
ಮೊದಲ ಆದ್ಯತೆಯಾಗಿ ಉದ್ಯೋಗ ಸೃಷ್ಟಿಸಲಾಗುವುದು. ಈ ಬಗ್ಗೆ ಈಗಾಗಲೇ ಜಿಪಂ ಸಿಇಒ ಜತೆ ಚರ್ಚಿಸಲಾಗಿದೆ. ಕೊಡಗು ಪುನರ್‌ ನಿರ್ಮಾಣದ ಕಾರ್ಯಕ್ರಮದಡಿ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್‌ ಒದಗಿಸಿ, ನಂತರ ಶಾಶ್ವತ ಮನೆ ನಿರ್ಮಿಸಿ ಕೊಡುವುದೇ ಮೊದಲ ಆದ್ಯತೆಯಾಗಿದೆ. ಹಾಗೆಯೇ ಎಲ್ಲೆಲ್ಲಿ ಸಂಪರ್ಕ ರಸ್ತೆಗಳು ಕಡಿದು ಹೋಗಿದೆಯೋ ಅದನ್ನೆಲ್ಲ ಸರಿಪಡಿಸುವ ಕಾರ್ಯ ವೇಗವಾಗಿ ನಡೆಸಲಾಗುತ್ತಿದೆ. ಈಗಾಗಲೇ ಹಾನಿಯಾಗಿರುವ ಪ್ರದೇಶದಲ್ಲಿ ಎಷ್ಟು ಕಡೆ ಜನ ವಸತಿ ಸಾಧ್ಯ ಎಂಬುದರ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ ಎಂದರು.

ಜಿಲ್ಲೆಯ ವಿರಾಜಪೇಟೆ ತಾಲೂಕು ವ್ಯಾಪ್ತಿಯ ಬುಡಕಟ್ಟು ಜನಾಂಗದವರು ಹೆಚ್ಚಿದ್ದಾರೆ. ಮಡಿಕೇರಿ, ಸೋಮವಾರಪೇಟೆ
ಭಾಗದಲ್ಲಿ ಅಷ್ಟೇನೂ ಇಲ್ಲ. ಯಾರ್ಯಾರ ಮನೆಗೆ ಹಾನಿಯಾಗಿದೆಯೋ ಅವರೆಲ್ಲರೂ ನಿರಾಶ್ರಿತರ ಶಿಬಿರದಲ್ಲೇ ಇದ್ದಾರೆ. ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಜಮೀನಿಗೆ ಸಂಬಂಧಿಸಿದ ಪತ್ರಗಳು, ಜಮೀನಿನ ಒಪ್ಪಂದ ಪತ್ರ ಇತ್ಯಾದಿ ಎಲ್ಲವನ್ನು ಕಳೆದುಕೊಂಡಿರುವವರು ಅನೇಕರಿದ್ದಾರೆ. ಅಂತವರಿಗೆ ಜಿಲ್ಲಾಡಳಿತದಿಂದಲೇ ಎಲ್ಲ ದಾಖಲೆ ಪತ್ರ ಸೃಷ್ಟಿಸಿ ಕೊಡುವ ಕೆಲಸವೂ ನಡೆಯುತ್ತಿದೆ. ಕುಟುಂಬದ ಯಜಮಾನನ ಹೆಸರು ಹಾಗೂ ಮನೆಯ ಹೆಸರಿನಆಧಾರದಲ್ಲಿ ದಾಖಲೆಗಳನ್ನು ಗ್ರಾಪಂ ಅಭಿವೃದಿಟಛಿ ಅಧಿಕಾರಿಗಳ ಸಹಕಾರದೊಂದಿಗೆ ಸಿದ್ಧಪಡಿಸಿ ಮಾಡಿಕೊಡುತ್ತಿದ್ದೇವೆ. ಕಾಫಿ ಸೇರಿ ವಿವಿಧ ಬೆಳೆ ಹಾನಿ, ಮೂಲಸೌಕ ರ್ಯದ ಹಾನಿಯ ಪರಿಶೀಲನೆಯ ಕಾರ್ಯವೂ ನಡೆಯುತ್ತಿದೆ ಎಂದರು.

ಜಿಲ್ಲಾಡಳಿತದಿಂದ ಕ್ರಮ: ಶ್ರೀವಿದ್ಯಾ ಉದ್ಯೋಗ ಕಳೆದುಕೊಂಡಿರುವ ನಿರಾಶ್ರಿತರಿಗೆ ಮರು ಉದ್ಯೋಗ ಸೃಷ್ಟಿಸಿಕೊಡುವ ಸಂಬಂಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕ್ರಿಯಾಯೋಜನೆ (ಆ್ಯಕ್ಷನ್‌ ಪ್ಯಾನ್‌) ಸಿದಟಛಿಪಡಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಬೇಕಾದ ಯೋಜನೆ ತಯಾರಾಗಿದೆ. ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಇನ್ನಷ್ಟು ಉದ್ಯೋಗ ನೀಡುತ್ತೇವೆಂದು ಕೊಡಗು ಜಿಲ್ಲಾಧಿಕಾರಿ
ಪಿ.ಐ.ಶ್ರೀವಿದ್ಯಾ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next