Advertisement

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

08:08 PM Dec 08, 2022 | Team Udayavani |

ಚಿಕ್ಕಮಗಳೂರು: ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕ ಸಂಬಂಧ ಇರುವ ಅಡೆತಡೆ ನಿವಾರಿಸಿ ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ಅರ್ಚಕರನ್ನು ನೇಮಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಗುರುವಾರ ತಾಲೂಕಿನ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆದು ದತ್ತಹೋಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೂ ಅರ್ಚಕರಿಂದ ದತ್ತಪಾದುಕೆ ಪೂಜೆ ನೆರವೇರಬೇಕೆಂಬ ದತ್ತಭಕ್ತರ ಹಲವು ದಶಕಗಳ ಬೇಡಿಕೆಯನ್ನು ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಈಡೇರಿಸುವ ಕೆಲಸ ಮಾಡಿದೆ. ಮುಂಬರುವ ದಿನಗಳಲ್ಲಿ ಅಡೆತಡೆ ನಿವಾರಿಸಿ ಪೂರ್ಣಕಾಲಿಕ ಅರ್ಚಕರ ನೇಮಕವಾಗಲಿದೆ. ದತ್ತಪೀಠಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಪುರಾಣಗಳಲ್ಲಿ ಉಲ್ಲೇಖವಿದೆ. ಈಗಾಗಲೇ ಕಾಶಿ ಕಾರಿಡಾರ್‌ ಮತ್ತು ಸೋಮನಾಥ್‌ ದೇವಸ್ಥಾನ ಅಭಿವೃದ್ಧಿಯಂತೆ ದತ್ತಪೀಠವನ್ನು ಪುನರುತ್ಥಾನಗೊಳಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ದತ್ತಪೀಠ ಪುನರುತ್ಥಾನಕ್ಕೆ ಈಗ ಕಾಲ ಕೂಡಿ ಬಂದಿದ್ದು, ಭಕ್ತರ ಆಶಯಗಳನ್ನು ಈಡೇರಿಸುವ ಕೆಲಸ ನಡೆಯಲಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆಯಾಗಿದ್ದು ದರ್ಗಾ ನಾಗೇನಹಳ್ಳಿಯ ಸರ್ವೇ ನಂ.57ರಲ್ಲಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸಮಸ್ಯೆ ಬಗೆಹರಿಸುವಂತೆ ಅಂದಿನ ಸಿದ್ದರಾಮಯ್ಯ ಸರ್ಕಾರದ ಅವ ಧಿಯಲ್ಲಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದರು ಎಂದರು.

ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಹಿಂದೂ ಅರ್ಚಕರನ್ನು ನೇಮಕ ಮಾಡಿದೆ. ಸರ್ಕಾರದ ವಾಸ್ತವ ದಾಖಲೆಗಳನ್ನು ಪರಿಗಣಿಸಿ ಎಸ್‌.ಎಂ. ಬಾಷಾ ಎಂಬುವವರು ದರ್ಗಾ ಬೇರೆ, ದತ್ತಪೀಠ ಬೇರೆ ಎಂದು ಪ್ರಕರಣ ದಾಖಲಿಸಿದ್ದು ಜಿಲ್ಲಾ ಧಿಕಾರಿ ನ್ಯಾಯಾಲಯದಲ್ಲಿ ತೀರ್ಪು ಹಿಂದೂಗಳ ಪರವಾಗಿದೆ. ಅಂದು ದತ್ತಪೀಠವನ್ನು ವಕ್‌f ಬೋರ್ಡ್‌ಗೆ ಸೇರ್ಪಡೆಗೊಳಿಸಿದ್ದರಿಂದ ಹಿಂದೂಗಳಿಗೆ ಅನ್ಯಾಯವಾಗಿದೆ. ಆ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಜನಾಂದೋಲನ, ಜನಜಾಗೃತಿ, ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸದ್ಯ ತಾತ್ಕಾಲಿಕವಾಗಿ ಹಿಂದೂ ಅರ್ಚಕರ ನೇಮಕವಾಗಿದ್ದು, ಒಂದು ಹಂತದ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ಅರ್ಚಕರ ನೇಮಕವಾಗಲಿದೆ ಎಂದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next