Advertisement

ತಜ್ಞರ ವರದಿ ಆಧರಿಸಿ ಕ್ರಮ

04:22 PM Aug 22, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ದಿನಗಳಿಂದ ಉಂಟಾಗುತ್ತಿರುವ ಭೂ ಕಂಪನಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ತಜ್ಞರಿಂದಆಧ್ಯಯನ ನಡೆಸಿ ವರದಿ ಆಧಾರದ ಮೇರೆಗೆ ಪರಿಹಾರ ಕ್ರಮಕೈಗೊಳ್ಳುವುದಾಗಿ ಸಂಸದ ಡಾ| ಉಮೇಶ ಜಾಧವ ಮತ್ತು ಸೇಡಂಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಗ್ರಾಮಸ್ಥರಿಗೆ ಭರವಸೆನೀಡಿದರು.

Advertisement

ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ರುದನೂರ,ಚಿಂತಪಳ್ಳಿ, ಭೂತಪುರ, ರಾಯಕೋಡ, ಗಡಿಕೇಶ್ವಾರ,ಹಲಚೇರಾ, ತೇಗಲತಿಪ್ಪಿ, ವಜೀರಗಾಂವ, ಕೊರವಿ, ಬಂಟನಳ್ಳಿ,ಬೆನಕನಳ್ಳಿ, ನಿಡಗುಂದಾ, ಶಿರೋಳಿ ಗ್ರಾಮಗಳಲ್ಲಿ ಶುಕ್ರವಾರಸಂಜೆ ಭೂಕಂಪನ ಉಂಟಾಗಿದ್ದ ಎಲ್ಲ ಗ್ರಾಮಗಳಿಗೂ ಸಂಸದಡಾ|ಉಮೇಶ ಜಾಧವ, ಸೇಡಂ ಶಾಸಕ ಡಾ| ರಾಜಕುಮಾರಪಾಟೀಲ ತೇಲ್ಕೂರ, ಕಂದಾಯ ಇಲಾಖೆ ಅ ಧಿಕಾರಿಗಳುಮಧ್ಯರಾತ್ರಿ ವರೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಿದರು.

ಗಡಿಕೇಶ್ವಾರ ಗ್ರಾಮದಲ್ಲಿ ಅನೇಕ ವರ್ಷಗಳಿಂದಭೂಕಂಪಿಸುತ್ತಿದೆ. ಇದರಿಂದ ಯಾವುದೇ ಆತಂಕ ಪಡುವಅಗತ್ಯವಿಲ್ಲ. ಎಲ್ಲರೂ ಧೈರ್ಯದಿಂದ ಇರಿ ಎಂದು ಹೇಳಿದರು.ಗಡಿಕೇಶ್ವಾರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಂಸದರು,ಭೂಗರ್ಭದಲ್ಲಿ ನಡೆಯುವ ನೈಸರ್ಗಿಕ ಸಹಜ ಪ್ರಕ್ರಿಯೆಗಳಿಂದಇಂತಹ ಘಟನೆಗಳು ನಡೆಯುತ್ತಿರುತ್ತವೆ. ನಮ್ಮ ಭಾಗದಲ್ಲಿ ಸುಣ್ಣದಕಲ್ಲಿನ ನಿಕ್ಷೇಪಗಳು ಹೆಚ್ಚು ಇರುವುದರಿಂದ ಇಂತಹ ಪ್ರದೇಶದಲ್ಲಿಮಳೆ ಹೆಚ್ಚಾದಾಗ ಮತ್ತು ಭೂಮಿ ಒಳಪದರು ಒಂದಕ್ಕೊಂದುಜೋಡಣೆ ಆಗುವ ಸಂದರ್ಭದಲ್ಲಿ ಭೂಮಿಯಿಂದ ಶಬ್ಬಉಂಟಾಗಿ ಭೂಮಿ ಕಂಪಿಸುತ್ತದೆ. ಆದರೂ ಇದರ ಬಗ್ಗೆ ತಜ್ಞರಿಂದಆಧ್ಯಯನ ನಡೆಸಲಾಗುವುದು ಎಂದರು.
ಈಗಾಗಲೇ ಕೇಂದ್ರ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅ ಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವಮುರುಗೇಶ ನಿರಾಣಿಗೆ ಹಾಗೂ ಜಿಲ್ಲಾಧಿ ಕಾರಿಗೆ ಗ್ರಾಮಗಳಲ್ಲಿಉಂಟಾಗುತ್ತಿರುವ ಭೂಕಂಪನ ಕುರಿತು ತಿಳಿಸಲಾಗಿದೆ. ಅನೇಕಗ್ರಾಮಗಳಲ್ಲಿ ಸಾಕಷ್ಟು ಮನೆಗೆಳು ತುಂಬಾ ಹಳೆಯದಾಗಿವೆ.ಆದ್ದರಿಂದ ಎಚ್ಚರಿಕೆಯಿಂದ ಇರಿ ಎಂದು ಹೇಳಿದರು.

ಪಕ್ಕದ ತೆಲಂಗಾಣ ರಾಜ್ಯದ ವಿಕಾರಾಬಾದ ನಗರದ ರಿಕ್ಟರ್‌ಮಾಪನದಲ್ಲಿ 3.9 ತೀವ್ರತೆಯಿಂದ ಭೂಮಿ ಕಂಪಿಸಿದ ಕುರಿತುದಾಖಲಾಗಿದೆ ಎಂದು ತಿಳಿಸಿದರು.ಗಡಿಕೇಶ್ವಾರ, ರುದನೂರ, ಚಿಂತಪಳ್ಳಿ, ಭಂಟನಳ್ಳಿ, ಬೆನಕನಳ್ಳಿ,ಹಲಚೇರಾ ಗ್ರಾಮಗಳಲ್ಲಿ ಜನರು ಭಯದಿಂದ ರಾತ್ರಿ ಮನೆಯಿಂದಹೊರಗೆ ಓಡಿಬಂದಿದ್ದರು. ಅಲ್ಲದೇ ಮನೆಯಂಗಳದಲ್ಲೇ ಕಂಬಳಿಹೊದ್ದು ಮಲಗಿದ್ದನ್ನು ಸಂಸದರು ವೀಕ್ಷಿಸಿದರಲ್ಲದೇ, ಎಲ್ಲರಿಗೂಧೈರ್ಯದಿಂದ ಇರುವಂತೆ ಹೇಳಿದರು.ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರಮಾತನಾಡಿ, ಗ್ರಾಮಗಳಲ್ಲಿ ಉಂಟಾಗುತ್ತಿರುವ ಭೂ ಕಂಪನಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಗಮನಕ್ಕೆ ತರಲಾಗಿದೆ. ಜಿಲ್ಲಾಧಿ ಕಾರಿಗಳು ಗ್ರಾಮಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಲಿದ್ದಾರೆ.

ಗ್ರಾಮಕ್ಕೆ ಬೇಕಾಗುವ ಪರಿಹಾರಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಗ್ರಾಮಗಳಲ್ಲಿನ ಜನರು ಭೂಕಂಪದಿಂದ ಭಯಭೀತರಾಗಿದ್ದಾರೆ. ಶೆಡ್‌ ನಿರ್ಮಿಸಿ ನಮ್ಮ ಜೀವ ಕಾಪಾಡಿ ಎಂದುಶಬ್ಬೀರಮಿಯಾ ಪಟೇಲ, ರಾಜಶೇಖರ ರೆಮ್ಮಣಿ ಸಂಸದರಿಗೆ,ಶಾಸಕರಿಗೆ ಮನವಿ ಮಾಡಿದರು.ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಸಿಪಿಐಜಗದೀಶ ಜಿ.ಕೆ, ಪಿಎಸ್‌ಐ ವಾತ್ಸಲ್ಯ, ಬಿಜೆಪಿ ಮುಖಂಡರಾದಮುಕುಂದ ದೇಶಪಾಂಡೆ, ಶರಣು ಮೆಡಿಕಲ್‌, ಆತೀಶ ಪವಾರ,ಶಿವಶರಣಪ್ಪ ಕುಂಬಾರ, ನಾಗರಾಜ ಬಸೂದೆ, ಮಲ್ಲಿಕಾರ್ಜುನಬೆನಕನಳ್ಳಿ, ರೇವಣಸಿದ್ಧಪ್ಪ ಅಣಕಲ್‌, ಬಸವರಾಜ ಕೆರೋಳಿ,ಮಲ್ಲಿಕಾರ್ಜುನ ರುದನೂರ, ಕೆ.ಎಂ. ಬಾರಿ, ಅಮರಲೊಡನೋರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next