Advertisement

ಜಿಂದಾಲ್‌ ಕೈಗಾರಿಕೆ ಬಂದ್‌ಗೆ ಕ್ರಮ: ಆನಂದ್‌ ಸಿಂಗ್‌

07:17 AM Jun 13, 2020 | Lakshmi GovindaRaj |

ಬಳ್ಳಾರಿ: ಜಿಂದಾಲ್‌ ಕೈಗಾರಿಕೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತೀ ಕಡಿಮೆ ಕಾರ್ಮಿಕ ರನ್ನು ಬಳಸುವುದು ಹಾಗೂ ಕಾರ್ಖಾನೆಯನ್ನು ಸಂಪೂರ್ಣ ಬಂದ್‌ ಮಾಡುವ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ ಎಂದು ಸಚಿವ  ಆನಂದ್‌ಸಿಂಗ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಹರಡುತ್ತಿರುವ ಕೋವಿಡ್‌ 19 ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮ  ಕೈಗೊಳ್ಳಲಾಗಿದೆ. ಜಿಂದಾಲ್‌ ಸಂಸ್ಥೆಯ ವ್ಯವಸ್ಥಾಪಕರೊಂ ದಿಗೂ ಚರ್ಚಿಸಲಾಗಿದೆ.

Advertisement

ಆದಷ್ಟು ಶೀಘ್ರ ಕೈಗಾರಿಕೆ  ಯನ್ನು ಸಂಪೂರ್ಣ ಬಂದ್‌ ಮಾಡುವ ರೀತಿಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು. ಜಿಂದಾಲ್‌  ಸಂಸ್ಥೆಯಲ್ಲಿ ಕೆಲವೊಂದು ಬಾಯ್ಲರ್‌ಗಳನ್ನು ಬಂದ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲವೇ ಕಾರ್ಮಿಕರನ್ನು ಬಳಸಿಕೊಡು ಕೆಲಸ ಮಾಡಿಸುವುದಾಗಿ ತಿಳಿಸಿದ್ದಾರೆ. ಸಿಬ್ಬಂದಿಗೆ ಮನೆಯಲ್ಲೇ  ಇರುವಂತೆ ಈಗಾಗಲೇ ಸೂಚಿಸಿದ್ದು, ಕಾರ್ಮಿಕರ ಸಂಖ್ಯೆ 1/3ಗೆ ಇಳಿಸುವುದಾಗಿಯೂ ತಿಳಿಸಿದ್ದಾರೆ. ಏಳು ದಿನಗಳ ಕಾಲ ಸೋಂಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿಟ್ಟರೆ ಸೋಂಕಿನ ಚೈನ್‌ ಲಿಂಕ್‌ ಕಡಿತವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next