Advertisement

ಕಂಪೆನಿಗಳ ವಿರುದ್ಧ ಕ್ರಮ

12:30 AM Jan 24, 2019 | Team Udayavani |

ಹೊಸದಿಲ್ಲಿ: ಹಲವು ಕಂಪೆನಿಗಳು ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಂಡು ಅದನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೇ ಮೋಸ ಮಾಡುತ್ತಿದ್ದ ಪ್ರಕರಣಗಳಲ್ಲ ಆದಾಯ ತೆರಿಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಮೊದಲ ಸುತ್ತಿನಲ್ಲಿ 10 ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ 10 ಕಂಪೆನಿಗಳು ಒಟ್ಟು 350 ಕೋಟಿ ರೂ. ಟಿಡಿಎಸ್‌ ಅನ್ನು ಪಾವತಿ ಬಾಕಿ ಉಳಿಸಿಕೊಂಡಿವೆ. ಆದಾಯ ತೆರಿಗೆ ಇಲಾಖೆ ಈ ಸಂಬಂಧ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಂತೆಯೇ ಕೆಲವು ಕಂಪೆನಿಗಳು ಸಮಸ್ಯೆ ಪರಿಹರಿಸಿಕೊಳ್ಳಲು ಮುಂದೆ ಬಂದಿವೆ. ಕ್ರೆಸ್ಟ್‌ ಲಾಜಿಸ್ಟಿಕ್ಸ್‌ ಕಂಪೆನಿಯು 110 ಕೋಟಿ ರೂ. ಟಿಡಿಎಸ್‌ ಪಾವತಿ ಬಾಕಿ ಉಳಿಸಿಕೊಂಡಿತ್ತು. ಅಲ್ಲದೆ ಹಬ್‌ಟೌನ್‌ 65 ಕೋಟಿ ರೂ., ಎಚ್‌ಸಿಸಿ 50 ಕೊಟಿ ರೂ. ಬಾಕಿ ಉಳಿಸಿಕೊಂಡಿತ್ತು. ಎರೋಸ್‌ ಇಂಟರ್‌ನ್ಯಾಷನಲ್‌ 19 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next