Advertisement

ಕೃಷಿ ಕಾಯ್ದೆ ವಾಪಸಾತಿಗೆ ರೈತಸಂಘ ಸಂಭ್ರಮ

10:37 AM Nov 20, 2021 | Team Udayavani |

ಸಾಗರ: ಕೇಂದ್ರ ಸರ್ಕಾರ ಮೂರು ಕೃಷಿಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿಶುಕ್ರವಾರ ರೈತ ಸಂಘದ ವತಿಯಿಂದಸಾಗರ ಹೋಟೆಲ್‌ ವೃತ್ತದಲ್ಲಿ ಪಟಾಕಿ ಸಿಡಿಸಿಸಂಭ್ರಮಾಚರಣೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಸಚಿವ ಕಾಗೋಡು ತಿಮ್ಮಪ್ಪ, ಕಳೆದ ಒಂದುವರ್ಷದಿಂದ ರೈತರು ದೆಹಲಿಯಲ್ಲಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಕೇಂದ್ರಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಯನ್ನುವಾಪಸ್‌ ಪಡೆದಿದೆ. ಕಾಯ್ದೆಯನ್ನು ಹಿಂದಕ್ಕೆಪಡೆದಿರುವುದನ್ನು ರೈತಸಂಘ ಸೇರಿದಂತೆ ನಾವೆಲ್ಲಾಸ್ವಾಗತಿಸುತ್ತಿದ್ದೇವೆ. ರೈತರು ಈತನಕ ಕೇಂದ್ರದಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರಪ್ರದೇಶ ಸೇರಿದಂತೆ ಬೇರೆ ಬೇರೆ ಕಡೆ ಚುನಾವಣೆಇದೆ ಎನ್ನುವ ಹಿನ್ನೆಲೆಯಲ್ಲಿ ಹೆದರಿ ಕಾಯ್ದೆಹಿಂದಕ್ಕೆ ಪಡೆಯಲಾಗಿದೆ ಎನ್ನುವ ಅನುಮಾನದೇಶವಾಸಿಗಳಲ್ಲಿ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರಮೋದಿಯವರು ಶಾಶ್ವತವಾಗಿ ಇಂತಹ ಕಾಯ್ದೆಜಾರಿಗೆ ತರುವುದಿಲ್ಲ ಎಂದು ದೇಶದ ರೈತರಿಗೆ ವಾಗ್ಧಾನ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರುಮಾತನಾಡಿ, ರೈತರ ಹೋರಾಟಕ್ಕೆ ಮಣಿದುಕೇಂದ್ರ ಕಾಯ್ದೆಯನ್ನು ಹಿಂದಕ್ಕೆ ಪಡೆದಿದೆ. ಇದೇರೀತಿ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆತಂದಿರುವ ತಿದ್ದುಪಡಿಯನ್ನು ಸಹ ಹಿಂದಕ್ಕೆಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಿ.ಆರ್‌. ಜಯಂತ್‌, ಸೂರಜ್‌,ಮಲ್ಲಿಕಾರ್ಜುನ ಹಕ್ರೆ, ರವಿ ಲಿಂಗನಮಕ್ಕಿ, ಡಾ|ರಾಜನಂದಿನಿ, ರಾಘವೇಂದ್ರ, ದಿನೇಶ್‌, ಕಿರಣ್‌ದೊಡ್ಮನೆ, ಮನೋಜ ಕುಗ್ವೆ ಇನ್ನಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next