Advertisement

ಉಗ್ರಾವತಾರಕ್ಕೆ ರಾಜ್ಯಾದ್ಯಂತ ಕಟ್ಟೆಚ್ಚರ: ಸಚಿವ ಬೊಮ್ಮಾಯಿ

11:40 PM Aug 30, 2019 | Team Udayavani |

ಹುಬ್ಬಳ್ಳಿ: “ರಾಜ್ಯದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂಬ ಕೇಂದ್ರದ ಸೂಚನೆ ಹಾಗೂ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ರಾಜ್ಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಇದ್ದಾಗ ಮಾತ್ರ ಕಲ್ಯಾಣ ರಾಜ್ಯ ಮಾಡಲು ಸಾಧ್ಯ. ಇದರ ಗುರುತರ ಜವಾಬ್ದಾರಿ ಗೃಹ ಇಲಾಖೆ ಮೇಲಿದೆ. ಆ ನಿಟ್ಟಿನಲ್ಲಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಮೂರು ದಿವಸ ಎಲ್ಲ ಹಿರಿಯ ಅಧಿಕಾರಿಗಳು, ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ.

ಸಂಕಷ್ಟಕ್ಕೊಳಗಾಗಿ ಪೊಲೀಸ್‌ ಠಾಣೆಗೆ ಬಂದ ಸಾಮಾನ್ಯರಿಗೆ ಅವರ ಕಷ್ಟ ಪರಿಹರಿಸುವ ರೀತಿಯಲ್ಲಿ ಸೌಹಾರ್ದತೆಯಿಂದ ವರ್ತಿಸಿ, ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ದುಷ್ಟಶಕ್ತಿಗಳು, ಸಮಾಜಘಾತುಕರು, ಅಕ್ರಮ ದಂಧೆಯಲ್ಲಿ ತೊಡಗಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದರು.

ಗೃಹ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ನೇಮಕಾತಿ, ತರಬೇತಿ, ಪೊಲೀಸರ ಆತ್ಮಸ್ಥೈರ್ಯ, ಆತ್ಮಾಭಿಮಾನ ಹೆಚ್ಚಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಹಾಗೂ ಸೈಬರ್‌ ಕ್ರೈಮ್‌ ಸೇರಿದಂತೆ ಹೊಸ ತಂತ್ರಜ್ಞಾನಗಳ ಬಗ್ಗೆ ಹಲವು ಬಾರಿ ಚರ್ಚಿಸಲಾಗಿದೆ. ಈಗಾಗಲೇ ಹಣಕಾಸು ಕಾರ್ಯ ದರ್ಶಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ತರಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next