Advertisement
ಆಫೀಸಲ್ಲಿ ಹೀಗೆ ಕಾಡಿದರೆ ಏನು ಮಾಡೋದು? ಚಿಂತೆ ಬೇಡ. ಜೇಬಲ್ಲಿ ಒಂದಷ್ಟು ಓಂ ಕಾಳನ್ನು ಹಾಕಿಕೊಂಡು ಬನ್ನಿ. ಅದನ್ನು ಆಗಾಗ, ತಿನ್ನುತ್ತಿರಿ. ಆಫೀಸಿಗೆ ಹೊರಡುವಾಗ ಮನೆಯ ಮುಂದಿನ ತುಳಸಿಯ ಎರಡು ಎಲೆ ಕಿತ್ತು ಬಾಯಿಗೆ ಹಾಕಿಕೊಳ್ಳಿ. ಇದು ಪಚನ ಕ್ರಿಯೆ ಸರಾಗಮಾಡುತ್ತದೆ. ಒಂದು ಬಾಟಲ್‌ನಲ್ಲಿ ಮಜ್ಜಿಗೆ ಇಟ್ಟುಕೊಂಡಿರಿ. ಅದಕ್ಕೆ ಮೂರು ನಾಲ್ಕು ಕಾಳು ಮೆಣಸನ್ನು ಜಜ್ಜಿ ಹಾಕಿ. ಯಾವ ಕಾರಣಕ್ಕೂ ಹಸಿಮೆಣಸನ್ನು ಹಾಕಬೇಡಿ. ಇದು ಅಸಿಡಿಟಿಯ ಕ್ಲೋಸ್ ಫ್ರೆಂಡ್. ಮೂರು ನಾಲ್ಕು ಸಲ ಕುಡಿದು ನೋಡಿ. ಆಫೀಸಲ್ಲಿ ಯಾವ ಕಾರಣಕ್ಕೆ ಅಸಿಡಿಟಿ ನಿಮ್ಮ ಹೊಟ್ಟೆಯಲ್ಲಿ ಕುಣಿಯುವುದಿಲ್ಲ. ಆಫೀಸಲ್ಲಿ ಬಾಸು ರೇಗಿದರು, ಕೆಲಸ ಮುಗಿದಿಲ್ಲ, ಸಹೋದ್ಯೋಗಿ ಕಿರಿಕಿರಿ ಮಾಡಿದರು ಅಂತ ಟೆನÒನ್ ತಗೊಂಡರೆ… ಹೊಟ್ಟೆ ಹಸಿವಾಗಲ್ಲ. ಅರ್ಧ ಹೊಟ್ಟೆ ಊಟ ಮಾಡುತ್ತೀರಿ. ಆಗಲೂ ಕೂಡ ಅಸಿಡಿಟಿ ತಾಳ ಹಾಕುತ್ತದೆ. ಅಂದರೆ, ಅಸಿಡಿಟಿಗೆ ನಾವು ತಿನ್ನುವ ಆಹಾರದಷ್ಟೇ ಮಾನಸಿಕ ಸ್ವಾಸ್ಥ್ಯ ಕೂಡ ಮುಖ್ಯ. ಕೆಲಸ ಮಾಡುವ ವಾತಾರವಣ ಒತ್ತಡ ರಹಿತವಾಗಿ, ಶುದ್ಧವಾಗಿಟ್ಟುಕೊಳ್ಳಿ. Advertisement
ಆಫೀಸಲ್ಲಿ ಅಸಿಡಿಟಿ
10:12 AM Jan 15, 2020 | mahesh |