ಕೋಟ: ವಿದ್ಯಾರ್ಥಿಗಳು ಬಾಲ್ಯದಲ್ಲೇ ತಮ್ಮ ಭವಿಷ್ಯದ ಕುರಿತು ನಿಶ್ಚಿತವಾದ ಗುರಿ ಇರಿಸಿಕೊಂಡು, ಅರ್ಹರ ಮಾರ್ಗದರ್ಶನ ಪಡೆದು ಅದರಂತೆ ಮುನ್ನಡೆದರೆ ಸಾಧನೆ ಸುಲಭ ಸಾಧ್ಯ ಎಂದು ಉದ್ಯಮಿ ಶ್ರೀಕಾಂತ್ ಶೆಣೆ„ ಹೇಳಿದರು.
ಅವರು ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಯುಗಾದಿ ಸಂಭ್ರಮ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ ಹಾಗೂ ಎಲ್ಲ ಮಾಧ್ಯಮಗಳಿಗಿಂತ ಪುಸ್ತಕ ಮಾಧ್ಯಮ ಅತಿ ವೇಗವಾಗಿ ವಿಚಾರಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಚಿತ್ರಕಲಾ ತರಬೇತಿ ಶಿಕ್ಷಕರಾದ ಗಿರೀಶ್ ಆಚಾರ್ಯ ವಕ್ವಾಡಿ, ಹರ್ಷ ಹಾಗೂ ಸುಮಾ ಕೋಟೇಶ್ವರ ವಿಕಸನ ನಾಲ್ಕು ತಂಡದ ನಾಯಕರು ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದ ಅಧಿಕಾರಿ ಕುಮಾರ್ ಪ್ರಸ್ತಾವಿಸಿ, ಶಿಬಿರಾರ್ಥಿ ಪ್ರತೀûಾ ನಿರೂಪಿಸಿದರು.