Advertisement

ಕೃಷ್ಯುತ್ಪನ್ನ, ಸಂಸ್ಕರಿತ ಆಹಾರ ವಸ್ತು ರಫ್ತಿನಲ್ಲಿ ಸಾಧನೆ

12:23 AM Aug 08, 2022 | |

ಹೊಸದಿಲ್ಲಿ: ಈ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ಕೃಷ್ಯುತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ವಸ್ತು ಗಳ ರಫ್ತು ಕಳೆದ ವರ್ಷದ ಇದೇ ಅವಧಿ ಗಿಂತ ಶೇ. 31ರಷ್ಟು ಹೆಚ್ಚಳ ಕಂಡಿದೆ.

Advertisement

2022ರ ಎಪ್ರಿಲ್‌ನಿಂದ ಜೂನ್‌ ವರೆಗಿನ ಅವಧಿಯಲ್ಲಿ 7.408 ಶತಕೋಟಿ ಡಾಲರ್‌ ಮೌಲ್ಯದ ಕೃಷ್ಯುತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು 5.663 ಶತಕೋಟಿ ಡಾಲರ್‌ ಆಗಿತ್ತು ಎಂದು ಅಂಕಿಅಂಶಗಳು ಹೇಳಿವೆ.

ಈ ವರ್ಷ ಈ ಅವಧಿಗೆ 5.890 ಶತಕೋಟಿ ಡಾಲರ್‌ ಮೌಲ್ಯದ ರಫ್ತು ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಗುರಿ ಮೀರಿದ ಸಾಧನೆ ಮಾಡಲಾಗಿದೆ.

ತಾಜಾ ಹಣ್ಣು ಮತ್ತು ತರಕಾರಿಗಳ ರಫ್ತಿನಲ್ಲಿ ಶೇ. 4ರಷ್ಟು ಹೆಚ್ಚು ಸಾಧನೆ ಮಾಡಲಾಗಿದ್ದರೆ ಸಂಸ್ಕರಿತ ಹಣ್ಣು ಮತ್ತು ತರಕಾರಿಗಳ ನಿರ್ಯಾತದಲ್ಲಿ ಶೇ. 59.71ರ ಪ್ರಗತಿ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next