ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಲಿಖಿತ ಪರೀಕ್ಷೆಯಲ್ಲಿ 7 ಜನ ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ನೀಡಿ ಪರೀಕ್ಷೆ ಬರೆಯಿಸಿದ್ದ ಅಭ್ಯರ್ಥಿಯನ್ನು ಗುರುವಾರ ಬಂಧಿಸಲಾಗಿದೆ.
ಗೋಕಾಕ ತಾಲೂಕಿನ ಉಪ್ಪಾರಟ್ಟಿ ಮಮದಾಪುರ ರಸ್ತೆಯ ಹನುಮಂತ ಮಲ್ಲಪ್ಪ ಗುದಿಗೊಪ್ಪ(22) ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
7 ಆಗಸ್ಟ್ 2022ರಂದು ನಡೆದಿದ್ದ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಆರೋಪಿ ಹನುಮಂತ ಪರೀಕ್ಷೆ ವೇಳೆ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ನೀಡಿದ್ದನು.
ಆರೋಪಿತರಾದ ಸಂಜೀವ ಭಂಡಾರಿ, ಬಾಳೇಶ ಕಟ್ಟಿಕಾರ್, ಸಿದ್ದಪ್ಪ ಮದಿಹಳ್ಳಿ, ಭೀಮಪ್ಪ ಗುದಿಗೋಪ್ಪ ಹಾಗೂ ಇನ್ನಿತರ ಆರೋಪಿತರೊಂದಿಗೆ ಸೇರಿ ಸಂಚು ರೂಪಿಸಿ, ಆರೋಪಿತರಾದ ಬಾಳೇಶ ಕಪಟ್ಟಿಕಾರ ಮತ್ತು ಮಂಜುನಾಥ ಮಾಳಿ ಅವರೊಂದಿಗೆ ಸೇರಿ 7 ಜನ ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ನೀಡಿದ್ದನು.